ಮಾತೃ ಭಾಷೆಯ ಶಿಕ್ಷಣ ಮಕ್ಕಳ ಭಾವನಾತ್ಮಕ ಬೆಳವಣಿಗೆಗೆ ನೆರವಾಗುತ್ತದೆ: ಡಾ. ಮಲ್ಲಿಕಾಜು೯ನ
Monday, September 22, 2025
ಮೂಡುಬಿದಿರೆ: ರಾಷ್ಟ್ರದ ಏಕತೆ, ಭದ್ರತೆ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಭಾಷೆಗಳ ನಡುವಿನ ಸಮನ್ವಯ ಸಹಕಾರಿ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ತಮ್ಮ ಮಾತೃ ಭಾಷೆಯಲ್ಲಿ ಕಲಿಯಲು ಅವಕಾಶ ನೀಡಬೇಕು. ಮಾತೃ ಭಾಷೆಯ ಶಿಕ್ಷಣ ಮಕ್ಕಳ ಸೃಜನಶೀಲತೆ, ಚಿಂತನಾ ಶಕ್ತಿ ಮತ್ತು ಭಾವನಾತ್ಮಕ ಬೆಳವಣಿಗೆಗೆ ನೆರವಾಗುತ್ತದೆ ಎಂದು ಉಜಿರೆಯ ಎಸ್‌ಡಿಎಂ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಎನ್. ಹೇಳಿದರು.
ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ನಡೆದ ಹಿಂದಿ ದಿನಾಚರಣೆಯ ಕರ‍್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆವಹಿಸಿದರು. ವಿದ್ಯಾರ್ಥಿಗಳು ಹಿಂದಿ ಭಾಷೆಯ ಮಹತ್ವ ಕುರಿತಾಗಿ ಪ್ರಬಂಧ, ಕವನ ವಾಚನ ಮತ್ತು ಹಿಂದಿ ಗೀತೆಗಳ ಚಟುವಟಿಕೆಯಲ್ಲಿ ಪಾಲ್ಗೊಂಡರು.
ವಿಭಾಗದ ಮುಖ್ಯಸ್ಥ ಡಾ.ದತ್ತಾತ್ರೇಯ ಹೆಗಡೆ ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಮೆಹರ್ ನಿರೂಪಿಸಿದರು. ಪೂರ್ವಿ ರೈ ಅತಿಥಿಗಳನ್ನು ಪರಿಚಯಿಸಿ, ರಕ್ಷಿತಾ ಪೂಜಾರಿ ಸ್ವಾಗತಿಸಿ, ಜುಹಾ ವಂದಿಸಿದರು.
