ಮೂಡುಬಿದಿರೆಯಲ್ಲಿ ‘ಆರೋಗ್ಯ ಜಾಗೃತಿ’ ಹಾಗೂ ‘ಸಭೆ ಸಮಾರಂಭಗಳಲ್ಲಿ ಶಿಸ್ತು ಪಾಲನೆ’ ಮಾಹಿತಿ ಕಾರ್ಯಕ್ರಮ
Tuesday, September 30, 2025
ಮೂಡುಬಿದಿರೆ: ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ಬಿ- ಹ್ಯೂಮನ್ ಸರ್ವಿಂಗ್ ಹ್ಯುಮಾನಿಟಿ ,ಮೂಡುಬಿದಿರೆ ಯುನಿಟ್ ಆಶ್ರಯದಲ್ಲಿ ‘ಆರೋಗ್ಯ ಮಾಹಿತಿ’ ಹಾಗೂ ‘ಸಭೆ ಸಮಾರಂಭಗಳಲ್ಲಿ ಶಿಸ್ತು ಪಾಲನೆ’ ಕುರಿತ ಮಾಹಿತಿ ಕಾರ್ಯಕ್ರಮವು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಮಂಗಳವಾರ ನಡೆಯಿತು.
ತೋಡಾರು ಜುಮ್ಮಾ ಮಸೀದಿಯ ಖತೀಬರಾದ ಮೂಸಾ ದಾರಿಮಿ ಅವರು ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ.ಫರ್ಹಾನ್ ಝಮೀರ್ ಅವರು ಆರೋಗ್ಯ ಜಾಗೃತಿ ಕುರಿತು ಮಾಹಿತಿ ನೀಡಿದರು.
ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ( ಅಬ್ಬಾಕ) ಹಾಗೂ ಕೋಟೆಬಾಗಿಲು ಖಿಲ್ಲಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಪಾರ್ಕರ್ ಶರೀಫ್ ಸಾಹೇಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಅಲ್ ಫುರ್ಖಾನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಆದಿಲ್ ಅವರು ಖಿರಾಅತ್ ನೆರವೇರಿಸಿದರು.ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಬ್ದುಸ್ಸಲಾಮ್ ಬೂಟ್ ಬಝಾರ್ ಅವರು ಸ್ವಾಗತಿಸಿ ಬಿ- ಹ್ಯೂಮನ್ ಸರ್ವಿಂಗ್ ಹ್ಯುಮಾನಿಟಿಯ ಮೂಡುಬಿದಿರೆ ಯುನಿಟ್ ಅಧ್ಯಕ್ಷ ಅಬುಲ್ ಅಲಾ ಪುತ್ತಿಗೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಇರ್ಷಾದ್ ಎನ್.ಜಿ. ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಜತೆ ಕಾರ್ಯದರ್ಶಿ ಫಾರೂಕ್ ವಿಶಾಲ್ ನಗರ ವಂದಿಸಿದರು.