ಜನಪರ ನೀತಿಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಾಕ್ಸ್೯ವಾದಿ ಪಕ್ಷದಿಂದ ರಾಜಕೀಯ ಸಮಾವೇಶ

ಜನಪರ ನೀತಿಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಾಕ್ಸ್೯ವಾದಿ ಪಕ್ಷದಿಂದ ರಾಜಕೀಯ ಸಮಾವೇಶ


ಮೂಡುಬಿದಿರೆ: ಕಾರ್ಮಿಕರು ಹಾಗೂ ಬಡವರಿಗೆ ಸಹಾಯವಾಗುವಂತಹ ಜನಪರ ನೀತಿಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಮೂಡುಬಿದಿರೆ ತಾಲೂಕು ಸಮಿತಿಯ ವತಿಯಿಂದ ಸಮಾಜ ಮಂದಿರದಲ್ಲಿ ಸೋಮವಾರ ರಾಜಕೀಯ ಸಮಾವೇಶ ನಡೆಯಿತು.

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಕೆ ಯಾದವ ಶೆಟ್ಟಿ ಸಭೆಯನ್ನುದ್ದೇಶಿ ಮಾತನಾಡಿ  ದುಡಿಮೆಯೊಂದಿಗೆ ತಮ್ಮ ಬದುಕು ನಡೆಸುತ್ತಿರುವ ಕಾರ್ಮಿಕರಿಗೆ ಇತ್ತೀಚಿನ ದಿನಗಳಲ್ಲಿ ಸಿಗಬೇಕಿರುವ ಮೂಲ ಸೌಲಭ್ಯಗಳು ದೊರಕದೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ . ಕಟ್ಟಡ ಕಾರ್ಮಿಕರು ಹಾಗೂ ಇತರ ಎಲ್ಲಾ ವಿಧದ ಕಾರ್ಮಿಕರಿಗೂ ಕೂಡ ಬದುಕು ದುರ್ಭರವಾಗಿದೆ. ಪರಿಸ್ಥಿತಿ ಹೀಗಿರುವಾಗ ಅವರ ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ ಆದುದರಿಂದ ಜನಪದ ನೀತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. 


ಸಿಪಿಐಎಂ ತಾಲೂಕು ಸಮಿತಿಯ ಕಾರ್ಯದರ್ಶಿ, ರಮಣಿ ಅಧ್ಯಕ್ಷೀಯ ಭಾಷಣವನ್ನು ಮಾಡಿ ಸರಕಾರ ಜನಪರ ನೀತಿಯನ್ನು ಅನುಸರಿಸಿ ಬಡವರು ಹಾಗೂ ಕಾರ್ಮಿಕರಿಗೆ ಸಹಾಯ ಹಸ್ತವನ್ನು ಚಾಚ ಬೇಕೆಂದು ಒತ್ತಾಯಿಸಿದರು. 

ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ, ಕಟ್ಟಡ ಕಾರ್ಮಿಕರ ಕಾರ್ಯದರ್ಶಿ ಶಂಕರ ವಾಲ್ಪಾಡಿ ಮಾತನಾಡಿದರು.

ಕೃಷ್ಣಪ್ಪ ಬೆಳುವಾಯಿ, ಜನವಾದಿ ಸಂಘಟನೆಯ ಲಕ್ಷ್ಮಿ, ಬೇಬಿ, ಪದ್ಮಾವತಿ ಹಾಜರಿದ್ದರು. ಸಂಚಾಲಕಿ ಗಿರಿಜಾ ಸ್ವಾಗತಿಸಿದರು. ದಲಿತ ಹಕ್ಕುಗಳ ಸಂಚಾಲಕ ಕೃಷ್ಣಪ್ಪ ಕೊಣಾಜಿ, ಧನ್ಯವಾದ ಸಲ್ಲಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article