
ಸೆ.20ರಂದು ಮೂಡುಬಿದಿರೆಯಲ್ಲಿ ವಿಶಿಷ್ಟ ಗುರುತಿನ ಚೀಟಿ (UDID) ನೋಂದಣಿ ಶಿಬಿರ
Monday, September 8, 2025
ಮೂಡುಬಿದಿರೆ: ಇಲ್ಲಿನ ಪುರಸಭೆ ಹಾಗೂ ಸರ್ಕಾರಿ ಆಸ್ಪತ್ರೆ, ತಾಲೂಕು ಪಂಚಾಯತ್ ಮೂಡುಬಿದಿರೆ, ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಂಗಳೂರು ನೇತೃತ್ವದಲ್ಲಿ ವಿಶಿಷ್ಟ ಗುರುತಿನ ಚೀಟಿ (UDID) ಮತ್ತು ಎಂಡೋಸಲ್ಫಾನ್ ತಪಾಸಣಾ ಶಿಬಿರ ಸೆ.20ರಂದು ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆಯಲಿದೆ.
ಫೋಟೋ - 4 (P.P Size), ಆಧಾರ್ ಕಾರ್ಡ್ original + 1 copy (colour xerox), Old Book (ವಿಕಲಚೇತನರ ಗುರುತಿನ ಪುಸ್ತಕ) ತರಬೇಕಾದ ಅಗತ್ಯ ದಾಖಲೆಗಳಾಗಿವೆ. ವಿಕಲಚೇತನರಿಗೆ ರಾಜ್ಯ ಸರಕಾರದಿಂದ ವಿವಿಧ ಸವಲತ್ತುಗಳು/ಸೇವೆಗಳಿಗಾಗಿ UDID ಕಾರ್ಡ್ ಅತೀ ಅಗತ್ಯ ವಾಗಿದೆ ಎಂದು ಪ್ರಕಟಣೆ ತಿಳಿಸಿದೆ.