
ಗಾಂಧಿನಗರ ಶಾಲೆಯಲ್ಲಿ ಗುರುವಂದನೆ
Monday, September 8, 2025
ಮೂಡುಬಿದಿರೆ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪುರಸಭೆ ವ್ಯಾಪ್ತಿಯ ಗಾಂಧಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಸೋಮವಾರ ನಡೆಯಿತು.
ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಕಸ್ತೂರಿ ಎಚ್., ಶಿಕ್ಷಕಿಯರಾದ ಭವ್ಯಾ, ಸುಪ್ರಿತಾ, ಅಕ್ಷತಾ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಯಶೋಧರ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯ ಶಿಕ್ಷಕಿಯರು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ಎಸ್‌ಡಿಎಂಸಿಯ ಪ್ರತಿ ಯೋಜನೆಗಳಿಗೆ ಶಿಕ್ಷಕರು ಸಕಾರತ್ಮವಾಗಿ ಸ್ಪಂದಿಸುತ್ತಿದ್ದು, ಇಲ್ಲಿ ನಡೆಯುವ ಕಾರ್ಯಕ್ರಮಗಳು, ಯೋಜನೆಗಳು ಯಶಸ್ವಿಯಾಗುತ್ತಿದೆ ಎಂದರು.
ಸದಸ್ಯರಾದ ಮಲ್ಲಿಕಾ, ಗುಣವತಿ ಶಿಕ್ಷಕರ ಕುರಿತು ಮಾತನಾಡಿದರು. ವಿದ್ಯಾರ್ಥಿನಿಯರು ತಾವೇ ರಚಿಸಿ, ರಾಗ ಸಂಯೋಜಿಸಿದ ಶಿಕ್ಷಕರ ಕುರಿತಾದ ಹಾಡನ್ನು ಹಾಡಿದರು
ಎಸ್‌ಡಿಎಂಸಿ ಸದಸ್ಯೆ ಅಕ್ಷತಾ ಸ್ವಾಗತಿಸಿದರು. ಪೂಜಾ ಕಾರ್ಯಕ್ರಮ ನಿರೂಪಿಸಿದರು.