ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ


ಮೂಡುಬಿದಿರೆ: ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2024-25 ನೇ ಸಾಲಿನ 11ನೇ ವರ್ಷದ ಮಹಾಸಭೆಯು ಭಾನುವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು.


ಸಹಕಾರಿಯ ಅಧ್ಯಕ್ಷ ರಂಜಿತ್ ಪೂಜಾರಿ ಅಧ್ಯಕ್ಷತೆಯಲ್ಲಿ ವಹಿಸಿ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಘವು 2 ಕೋಟಿ 32 ಲಕ್ಷ ರೂ ಸ್ವಸಹಾಯ ಸಂಘಗಳಿಗೆ ಸಾಲವನ್ನು ನೀಡುತ್ತಾ ಬಂದಿದೆ. ಮಾತ್ರವಲ್ಲದೇ 2019 ರಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ವೈದ್ಯಕೀಯ ನೆರವು, ವಿದ್ಯಾಬ್ಯಾಸದ ನೆರವು, ಶೌಚಾಲಯದ ನೆರವು ಹಾಗೂ ಮನೆ ಕಟ್ಟುವವರಿಗೆ ಧನಸಹಾಯವನ್ನು ವಿಶೇಷ ಸೇವಾ ಮನೋಭಾವನೆಯನ್ನಿಟ್ಟುಕೊಂಡು ಬಂದ ಲಾಭಾಂಶದಲ್ಲಿ ಸಾಮಾಜಿಕ ಕೆಲಸ ಕಾರ್ಯಗಳಲ್ಲೂ ಸಹಕಾರಿ ಸಂಘ ತೊಡಗಿಸಿಕೊಂಡಿದೆ ಎಂದರು. 


ವಾರ್ಷಿಕವಾಗಿ ಸಂಸ್ಥೆಯ ಆದಾಯದಲ್ಲಿ 2.50 ಲಕ್ಷ ರೂ ಅನ್ನು ಸ್ವಸಹಾಯ ಸಂಘಗಳನ್ನು ಸೇರಿಸಿ, ಸಮಾಜದ ಅಗತ್ಯಗಳಿಗೆ ಸ್ಪಂದಿಸಿ ಸಾಮಾಜಿಕ ಕಾರ್ಯಗಳಲ್ಲೂ ಪಂಚಶಕ್ತಿ ಸಹಕಾರಿ ಸಂಸ್ಥೆಯೂ ನೆರವಾಗುತ್ತಿದೆ. ಹಾಗೂ ಈ ಬಾರಿ ಪುರಸಭೆ ಮುಂಬಾಗದಲ್ಲಿ ಫಾರ್ಚೂನರ್ ಬಿಲ್ಡಿಂಗ್‌ನಲ್ಲಿ 1 ಕೋಟಿ ವೆಚ್ಚದ ಸ್ವಂತ ಕಟ್ಟಡವನ್ನು ಖರೀದಿಸಲಾಗಿದೆ, ಮುಂದಿನ ದಿನಗಳಲ್ಲಿ ಆ ಸ್ವಂತ ಕಟ್ಟಡಕ್ಕೆ ಸಹಕಾರಿ ಸಂಘವು ಸ್ಥಳಾಂತರಗೊಳ್ಳಲಿದೆ ಎಂದರು.

ಸ್ವಸಹಾಯ ತಂಡದ ಸದಸ್ಯರ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. 

2024-25 ನೇ ಸಾಲಿನಲ್ಲಿ ಅತೀ ಹೆಚ್ಚು ಪಿಗ್ಮಿ ಸಂಗ್ರಹಿಸಿದ ಪಿಗ್ಮಿ ಸಂಗ್ರಾಹಕ ದಿನೇಶ್ ಪೂಜಾರಿ ಅವರನ್ನು ಹಾಗೂ ಉತ್ತಮ ಗ್ರಾಹಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸ್ವ ಸಹಾಯ ತಂಡಗಳಲ್ಲಿ ಎ ಗ್ರೇಡ್ ಪಡೆದುಕೊಂಡಿರುವ ಸ್ವಸಹಾಯ ತಂಡದ ಅಧ್ಯಕ್ಷರು , ಕಾರ್ಯದರ್ಶಿಗಳನ್ನು ಗೌರವಿಸಲಾಯಿತು.

ಶಾಖಾಧಿಕಾರಿ ಯು.ಆರ್ ಮಧ್ಯಸ್ಥ ಮಹಾಸಭೆ ನೋಟಿಸ್ , 2024-25ನೇ ಸಾಲಿನ ವಾರ್ಷಿಕ ವರದಿ ಮತ್ತು ಮಂಜೂರಾತಿ, ಹಾಗೂ ಸಮಾಜಸೇವೆಗೆ ಸಹಾಯಧನ ಪ್ರಸಾದ್ ಆಚಾರ್ಯ ಗೆ ಮತ್ತು ಅಶಕ್ತ ಕುಟುಂಬಗಳ ಸಹಾಯಧನ ವಿವರವನ್ನು ವಾಚಿಸಿದರು.

ನಿರ್ದೇಶಕ ರಮೇಶ್ ಎಸ್ ಶೆಟ್ಟಿ 2023-24 ನೇ ಸಾಲಿನ ಮಹಾಸಭೆಯ ನಡವಳಿಯನ್ನು ಮಂಡಿಸಿದರು.

2024-25ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಗಣೇಶ್ ವಿವರಿಸಿ, ಬಜೆಟ್ ಗಿಂತ ಜಾಸ್ತಿಯಾದ ಖರ್ಚಿನ ಮಂಜೂರಾತಿ ವರದಿಯನ್ನು ಸ್ವಾತಿ ಓದಿ ತಿಳಿಸಿದರು. 

ಲಾಭಾಂಶ ವಿಂಗಡಣೆಯನ್ನು ರಾಜೇಂದ್ರ, ಹಾಗೂ 2025-26ನೇ ಸಾಲಿನ ಬಜೆಟ್ ನ್ನು ಶರತ್ ಜೆ.ಶೆಟ್ಟಿ ಮಂಡಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಲೆಕ್ಕ ಪರಿಶೋಧನೆಯ ಪಾಲನಾ ವರದಿ ವಾಚಿಸಿದರು. 

ನಿರ್ದೇಶಕ ಗೋಪಾಲ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿ, ರಮೇಶ್ ಎಸ್.ಶೆಟ್ಟಿ ಸ್ವಾಗತಿಸಿದರು. ಉಷಾ ಭಂಡಾರಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article