ನನ್ನನ್ನು ತಿದ್ದಿ ತೀಡಿದ, ನನ್ನ ನೆಚ್ಚಿನ ಶಿಕ್ಷಕಿ ರಂಜಿತಾ ರಾಜೀವ್
Friday, September 5, 2025
ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢ ಶಾಲೆ ಪೊಳಲಿಯ ಶಿಕ್ಷಕಿ ಇವರು 2006 ರಲ್ಲಿ ಪ್ರಾರಂಭದಿಂದ ಇಲ್ಲಿಯವರೆಗೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ತನ್ನ ವೃತ್ತಿಯೊಂದಿಗೆ ಎಲ್ಲಾ ಶಿಕ್ಷಕರು ಮತ್ತು ಎಸ್.ಟಿ.ಎಮ್.ಸಿ. ಸದಸ್ಯರ ಜೊತೆ ಈ ಶಾಲೆಯ ಅಭಿವೃದ್ಧಿಯೊಂದಿಗೆ ಹಾಗೂ ಕ್ರೀಡೆ ಸಂಸ್ಕೃತಿಗೆ ಪ್ರಾಮುಖ್ಯತೆ ನೀಡಿದವರು ಇವರು.
ನಮ್ಮ ಶಾಲೆಯಲ್ಲಿ ಕಲಿತ 100% ವಿದ್ಯಾರ್ಥಿಗಳಲ್ಲಿ 99% ವಿದ್ಯಾರ್ಥಿಗಳು ಇವರನ್ನು ಪ್ರೀತಿಸುತ್ತಾರೆ. ಯಾಕೆಂದರೆ ಯಾವಾಗ ಬೇಕಾದರೂ ಅವರ ಜೊತೆ ಮಾತನಾಡಿದರೂ ಅವರು ನಮಗೆ ಕೊಡುವ ಪ್ರೀತಿ ಅಷ್ಟು. ಪೊಳಲಿ ಊರಿಗೆ ಹೋಗಿ ಪೊಳಲಿ ಶಾಲೆಯ ರಂಜಿತಾ ಟೀಚರ್ ಗೊತ್ತುಂಟಾ ಎಂದು ಕೇಳಿದರೆ ಗೊತ್ತಿಲ್ಲ ಎನ್ನುವ ಮಾತು ಇಲ್ಲ ಏಕೆಂದರೆ ಇವರು ಅಷ್ಟು ಮಟ್ಟಿಗೆ ಪರಿಚಿತ ವ್ಯಕ್ತಿ.
ಇವರು ಸಮಾಜ ವಿಜ್ಞಾನ ಶಿಕ್ಷಕಿಯಾಗಿದ್ದು, ತರಗತಿಯ ಸಮಯದಲ್ಲಿ ಪಾಠದ ಜೊತೆ ಜೊತೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳೊಂದಿಗೆ, ಹಾಸ್ಯಮಯವಾಗಿ ಮಾತನಾಡಿಸಿ ಎಲ್ಲರನ್ನು ನಗಿಸುತ್ತಾ ಅದರ ಜೊತೆಗೆ ಜೀವನದ ಮೌಲ್ಯವನ್ನು ತಿಳಿಸಿ ಕೊಡುತ್ತಿದ್ದಾರೆ ನನ್ನ ನೆಚ್ಚಿನ ಶಿಕ್ಷಕಿ ರಂಜಿತಾ ರಾಜೀವ್.
-ನಿರೀಕ್ಷಾ
