ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಹಿಂದಿ ದಿನಾಚರಣೆ
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ಸಹಾಯಕ ಅಧ್ಯಾಪಕ ರಾಮಕೃಷ್ಣ ಕೆ.ಎಸ್. ಅವರು ಹಿಂದಿ ಭಾಷೆಯ ಪ್ರಾಮುಖ್ಯತೆ ಕುರಿತು ಮಾತನಾಡಿ, ನಾವು ಹಿಂದಿ ಎಂಬ ಹೆಸರನ್ನು ಕೇಳಿದಾಗ, ನಮ್ಮೊಳಗೆ ಒಂದು ರೀತಿಯ ಪ್ರಜ್ಞೆ ಮೂಡುತ್ತದೆ, ಆ ಪ್ರಜ್ಞೆಯು ನಮ್ಮನ್ನು ಒಂದಾಗಿಸುತ್ತದೆ. ನಮ್ಮ ಗುರುತು ಇತರ ದೇಶಗಳಲ್ಲಿ ಹಿಂದಿಯಿಂದಲೇ ಇರಬೇಕು. ಹಿಂದಿಯಿಂದ ನಮಗೆ ಮಹತ್ವ ಸಿಗುತ್ತಿದೆ. ನಾವು ಭಾಷೆಯನ್ನು ಕಲಿತರೆ ನಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನಮ್ಮಲ್ಲಿ ಆತ್ಮವಿಶ್ವಾಸವಿದ್ದರೆ ಯಾವುದೇ ಕೆಲಸವನ್ನು ಸುಲಭವಾಗಿ ಮಾಡಬಹುದು.ಪ್ರಪಂಚದಾದ್ಯಂತ ಸಾವಿರಾರು ಭಾಷೆಗಳನ್ನು ಮಾತನಾಡುತ್ತಾರೆ, ಅವುಗಳಲ್ಲಿ ಹಿಂದಿ ಮೂರನೇ ಸ್ಥಾನದಲ್ಲಿದೆ. ಹಿಂದಿ ಭಾಷೆಯು ಇಡೀ ದೇಶವನ್ನು ಒಗ್ಗೂಡಿಸುತ್ತದೆ ಎಂದು ಹೇಳಿದರು.
ಅಶ್ವಿನಿ ಮತ್ತು ತಂಡದವರಿಂದ ಪ್ರಾರ್ಥನೆ ನೆರವೇರಿಸಿದರು. ಹಿಂದಿ ಪ್ರಾಧ್ಯಪಕಿ ಡಿಂಪಲ್ ತಾವ್ರೋ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿಯಾದ ಮುಕ್ಷಿತ್ ಸ್ವಾಗತಿಸಿ, ಅಹದ್ ವಂದಿಸಿದರು. ದಿಲ್ ಶಾನ, ಕನೀಸ್ ಹಾಗೂ ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು.

