ಎಲೆಗಳ ಮೌಲ್ಯ ಅರಿವಿಗೆ ಸಸ್ಯ ಪರ್ಣಿ ಸಪ್ತಾಹ ಕಾರ್ಯಕ್ರಮ
Monday, September 22, 2025
ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಲ್ಲಿ ಸಸ್ಯ ಪರ್ಣಿ ಸಪ್ತಾಹ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಸ್ಯಪತ್ರಗಳ ವಿವಿಧ ಆಯಾಮಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವನ್ನು ಅರ್ಥಶಾಸ್ತ್ರ ವಿಭಾಗದ ಪ್ರೊ. ಜಯವಂತ ನಾಯಕ್ ಉದ್ಘಾಟಿಸಿದರು.
ಎಲ್. ಗೋವಿಂದ ರಾಜ್ ಅವರು ಸಸ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಶೋಭಾ ಹಾಗೂ ಡಾ. ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಎಲೆ ಮತ್ತು ವಿಧಗಳು (ಜೇಸನ್ ಪಿಂಟೋ), ಔಷಧೀಯ ಮೌಲ್ಯ (ಆವನಿಂತಿಕಾ), ಪೌಷ್ಠಿಕ ಮೌಲ್ಯ (ಕಾವ್ಯ), ವಾಣಿಜ್ಯ ಮೌಲ್ಯ (ಯಶಸ್ವಿನಿ), ಸೌಂದರ್ಯಾತ್ಮಕ ಮೌಲ್ಯ (ಗಮನ) ಮತ್ತು ಪರಿಸರ ಮೌಲ್ಯ (ದೀತಾಕ್ಷಿ) ಏಳು ದಿನಗಳ ಈ ಕಾರ್ಯಕ್ರಮದಲ್ಲಿ ಎಲೆಗಳ ವಿವಿಧ ಮೌಲ್ಯಗಳ ಕುರಿತು ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.
ಇದೇ ವೇಳೆ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳೆಲ್ಲರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಸ್ಯ ಮತ್ತು ಮಾನವನ ನಡುವಿನ ಸಂಬಂಧಗಳನ್ನು ಸಂಶೋಧನಾತ್ಮಕವಾಗಿ ಅರಿತುಕೊಳ್ಳಲು ನೆರವಾಯಿತು.