ಸಂತ ಫಿಲೋಮಿನಾ ಕಾಲೇಜು: ‘ಎಂಪವರ್ ವಿಮೆನ್, ಟ್ರಾನ್ಸಾಫಾರ್ಮ್ ಲೈವ್ಸ್’ ಕಾರ್ಯಕ್ರಮ
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಮಾತನಾಡಿ, ‘ಮಹಿಳೆಯರು ತಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಛಲವನ್ನು ಹೊಂದಿಕೊಂಡಿರಬೇಕು. ಸಮಾಜದಲ್ಲಿ ಮಹಿಳೆಯರು ಎದ್ದು ನಿಲ್ಲಬೇಕು, ವೀರ ರಾಣಿ ಒನಕೆ ಓಬವ್ವನಂತೆ ಶತ್ರುಗಳ ಜೊತೆ ಹೋರಾಡಬೇಕು. ಯಾರಿಗೂ ಹೆದರದೆ ತಮ್ಮ ವಿಚಾರಗಳನ್ನು ಮುಂದಿಡಬೇಕು. ಸೋಮಾರಿತನವನ್ನು ಬಿಟ್ಟು ಜೀವನದಲ್ಲಿ ಮುನ್ನುಗಬೇಕು. ನಿಮ್ಮ ಕಲಿಯುವಿಕೆಯನ್ನು ಚೆನ್ನಾಗಿ ಮುಂದುವರಿಸಿ ಎಂದು ಹೇಳಿದರು.
ವಿಮೆನ್ ಎಪೌಂವೆರ್ಮೆಂಟ್ ಸೆಲ್ ಸಂಯೋಜಕಿ ಪ್ರೇಮಲತಾ ಕೆ. ಮತ್ತು ಆಂಟಿ ವಿಮೆನ್ ಹಾರ್ರಸಮೆಂಟ್ ಸೆಲ್ ಸಂಯೋಜಕಿ ನೋವ್ಲಿನ್ ಎನ್. ಡಿ’ಸೋಜಾ, ಪಿಆರ್‌ಒ ಭಾರತಿ ಎಸ್. ರೈ, ಕಾಲೇಜಿನ ಮಹಿಳಾ ಉಪನ್ಯಾಸಕಿಯರು ಮತ್ತು ಮಹಿಳಾ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ತ್ರಿತೀಯ ಬಿಎಸ್ಸಿ ವಿದ್ಯಾರ್ಥಿನಿಯರಾದ ಅಖಿಲ ಮತ್ತು ನವ್ಯ ಪ್ರರ್ಥನೆ ನೆರವೇರಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಲಾನಿಷಾ ಡಿ’ಸೋಜಾ ಸ್ವಾಗತಿಸಿ, ರಿಯಾ ವಂದಿಸಿದರು. ವಿದ್ಯಾರ್ಥಿನಿ ಅಪೂರ್ವ ಡಿ. ಕಾರ್ಯಕ್ರಮವನ್ನು ನಿರೂಪಿಸಿದರು.
