ಸೂಡ ಗ್ರಾಮಕರಣಿಕರ ಕಾರ್ಯಾಲಯ, ಬೆಳ್ಮಣ್ ವಾಣಿಜ್ಯ ಸಂಕೀರ್ಣ ಉದ್ಘಾಟನೆ
Wednesday, September 24, 2025
ಶಿರ್ವ: ಬೆಳ್ಮಣ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೂಡ ಗ್ರಾಮದಲ್ಲಿ ನಿರ್ಮಾಣಗೊಂಡ ಗ್ರಾಮಕರಣಿಕರ ಕಾರ್ಯಾಲಯ ಹಾಗೂ ಬೆಳ್ಮಣ್ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣವನ್ನು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಬುಧವಾರ ಉದ್ಘಾಟಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಮೇಶ್ವರಿ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಗ್ರಾ.ಪಂ. ಉಪಾಧ್ಯಕ್ಷ ಸಂದೀಪ್ ಅಂಚನ್, ಮಾಜಿ ಜಿಲ್ಲಾ ಪಂ. ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ, ಮಾಜಿ ತಾ.ಪಂ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಮಾಜಿ ಉಪಾಧ್ಯಕ್ಷೆ ಸಹಾನ ಕುಂದರ್ ಸೂಡಾ, ಸೂರ್ಯಕಾಂತ್ ಶೆಟ್ಟಿ ಕೆದಿಂಜೆ, ದೇವೇಂದ್ರ ಶೆಟ್ಟಿ, ಬೋಳ ಸತೀಶ್ ಪೂಜಾರಿ, ರವೀಂದ್ರ ಶೆಟ್ಟಿ ಮುಲ್ಲಡ್ಕ, ನಿತ್ಯಾನಂದ ಶೆಟ್ಟಿ ಪೆರಲ್‌ಪಾದೆ, ಮೋಹನ್‌ದಾಸ್ ಶೆಟ್ಟಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಮತಾ ಶೆಟ್ಟಿ, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.