ಗ್ರಾಹಕ ವೇದಿಕಯ ಚಟುವಟಿಕೆಗಳ ಉದ್ಘಾಟನೆ

ಗ್ರಾಹಕ ವೇದಿಕಯ ಚಟುವಟಿಕೆಗಳ ಉದ್ಘಾಟನೆ


ಪುತ್ತೂರು: ಗ್ರಾಹಕರ ಹಕ್ಕುಗಳು ಹಾಗೂ ಹೊಣೆಗಾರಿಕೆಗಳ ಬಗ್ಗೆ ಜಾಗೃತಿ ಹರಡಿಸುವ ಮಹತ್ವದ ಉದ್ದೇಶದಿಂದ ಸಂತ ಫಿಲೋಮೀನಾ ಕಾಲೇಜು (ಸ್ವಾಯತ್ತ) ಪುತ್ತೂರು ಇಲ್ಲಿ ಗ್ರಾಹಕರ ವೇದಿಕೆ ಚಟುವಟಿಕೆಗಳನ್ನು ಉದ್ಘಾಟಿಸಿತು.


ಖ್ಯಾತ ವಕೀಲರಾದ ಭಾಸ್ಕರ ರಾವ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗ್ರಾಹಕ ಹಕ್ಕುಗಳ ಕುರಿತಂತೆ ಮಾಹಿತಿ ನೀಡಿ, ಗ್ರಾಹಕರು ಬಳಸುವ ಉತ್ಪನ್ನಗಳ ಬಗ್ಗೆ ಜಾಗರೂಕರಾಗಿರಾಬೇಕು ಮತ್ತು ದುರುಪಯೋಗವನ್ನು ತಡೆಗಟ್ಟಲು ಬದ್ಧರಾರಬೇಕು  ಎಂದು ತಿಳಿಸಿದರು. 


ಕಾಲೇಜು ಪ್ರಾಂಶುಪಾಲರಾದ ಡಾ. ಅಂಟೋನಿ ಪ್ರಕಾಶ್ ಮೊಂತೆರೋ ಅವರು ಮಾತನಾಡಿ, ಗ್ರಾಹಕರು ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿ, ಗ್ರಾಹಕರ ವೇದಿಕೆಯನ್ನು ಸಬಲಗೊಳಿಸುವ ಕ್ರಿಯಾ ಯೋಜನೆಯನ್ನು ಅನಾವರಣಗೊಳಿಸಿದರು. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಮುದಾಯಕ್ಕೆ ಹಿತಕರವಾದ ಕಾರ್ಯಪದ್ಧತಿಯನ್ನು ಪರಿಚಯಿಸಿದರು.


ಈ ಕಾರ್ಯಕ್ರಮವನ್ನು ಗ್ರಾಹಕ ವೇದಿಕೆ ಸಂಚಾಲಕರಾದ ಪ್ರವೀಣ್ ಡಿ ಮತ್ತು ಸ್ವಾತಿ ಶೆಟ್ಟಿ ಡಿ. ಅವರು ನಿರ್ವಹಿಸಿದರು. ವಿಸ್ಮಿತ್ ವಿದೀಪ್ ಸ್ವಾಗತಿಸಿ, ಸಫೀನಾ ವಂದಿಸಿದರು. ಅಪೂರ್ವ ಡಿ ಕಾರ್ಯಕ್ರಮದ ನಿರೂಪಿಸಿದರು. ಲಿಖಿತಾ ಪಿ ಅವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು.

ಈ ಕಾರ್ಯಕ್ರದಲ್ಲಿ ಗ್ರಾಹಕರ ವೇದಿಕೆಯ ಸಂಸದೀಯ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article