ಕಟಪಾಡಿ ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹ: ಯುವ ಕಾಂಗ್ರೆಸ್ನಿಂದ ಪ್ರತಿಭಟನೆ
ಶಿರ್ವ: ಶಿರ್ವ ಯುವ ಕಾಂಗ್ರೆಸ್ ವತಿಯಿಂದ ಗುರುವಾರ ಶಿರ್ವದಲ್ಲಿ ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡದ ಶಾಸಕರ ವಿರುದ್ಧ ರಸ್ತೆ ತಡೆದು ಪ್ರತಿಭಟನೆ ನಡೆಯಿತು.
ಕಾಪು ಬ್ಲಾಕ್ ಅಧ್ಯಕ್ಷ ವೈ.ಸುಕುಮಾರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ಧೀನ್, ಶಿರ್ವ ಗ್ರಾ.ಪಂ. ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್, ಮೈಕಲ್ ರಮೇಶ್ ಡಿಸೋಜ, ರಮೀಜ್ ಹುಸೇನ್, ಮೆಲ್ವಿನ್ ಡಿಸೋಜಾ ಮಾತನಾಡಿ, ಶಾಸಕರ ಹಾಗೂ ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಕಿಡಿಕಾರಿದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ರಸ್ತೆಯ ದುರಸ್ತಿ ಕಾರ್ಯ ತಕ್ಷಣ ಮಾಡಬೇಕೆಂದು ಮನವಿ ನೀಡಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಲೆ, ಗ್ರೇಸಿ ಕರ್ಡೋಜಾ, ಹಸನಬ್ಬ ಶೇಖ್, ರತನ್ ಶೆಟ್ಟಿ, ರಮೇಶ್ ಬಂಗೇರಾ,ಗ್ಲಾಡಿಸ್ ಅಲ್ಮೇಡಾ, ಜುಬೇರ್ ಅಲಿ, ಹಸನ್ ಇಬ್ರಾಹಿಮ್,ಜೈನುದ್ಧೀನ್, ಆಶಾ ಅಂಚನ್, ಗಿರೀಶ್ ಕೊಟ್ಯಾನ್, ಮುಖಂಡರುಗಳಾದ ಮೊಹಮ್ಮದ್ ನಿಯಾಜ್,ಅಬ್ದುಲ್ ಲತೀಫ್, ಅಬ್ದುಲ್ ಅಹಾದ್, ಅರುಣ್ ಪೂಜಾರಿ ಮತ್ತಿತರರು ಹಾಜರಿದ್ದರು.
ಶಿರ್ವ ಗ್ರಾಮೀಣ ಕಾಂಗ್ರೇಸ್ ಅಧ್ಯಕ್ಷ ನ್ಯಾಯವಾದಿ ಮೆಲ್ವಿನ್ ಡಿಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.