ನಂದಳಿಕೆ ಗ್ರಾಮ ಪಂಚಾಯತ್-ಗ್ರಾಮ ಸಭೆ: ಜ್ವಲಂತ ಸಮಸ್ಯೆಗಳ ಗಮನ ಸೆಳೆದ ಗ್ರಾಮಸ್ಥರು

ನಂದಳಿಕೆ ಗ್ರಾಮ ಪಂಚಾಯತ್-ಗ್ರಾಮ ಸಭೆ: ಜ್ವಲಂತ ಸಮಸ್ಯೆಗಳ ಗಮನ ಸೆಳೆದ ಗ್ರಾಮಸ್ಥರು


ಶಿರ್ವ: ನಂದಳಿಕೆ ಗ್ರಾಮ ಪಂಚಾಯತಿಯ 2024-25ನೇ ಸಾಲಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ವಿನೋಧ ಅವರ ಅಧ್ಯಕ್ಷತೆಯಲ್ಲಿ ನಂದಳಿಕೆ ಬೋರ್ಡು ಶಾಲಾ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಸಭೆಯಲ್ಲಿ ಆರೋಗ್ಯ ಇಲಾಖೆ, ಮೆಸ್ಕಾಂ ಇಲಾಖೆ ಹಾಗೂ ಅರಣ್ಯ, ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಮಾಹಿತಿಯನ್ನು ನೀಡಿದರು. ನಂದಳಿಕೆ ಗ್ರಾಮಕ್ಕೆ ಕಳೆದ ಹಲವು ಸಮಯದಿಂದ ದಾರಿದೀಪದ ವ್ಯವಸ್ಥೆಯಾಗಿಲ್ಲ ಈ ಬಗ್ಗೆ ಸೂಕ್ತ ಕ್ರಮವನ್ನು ಮೆಸ್ಕಂ ಇಲಾಖೆ ಕೈಗೊಳ್ಳುವಂತೆ ಪಂಚಾಯತ್ ಸದಸ್ಯ ನಿತ್ಯಾನಂದ ವಿನಂತಿಸಿಕೊಂಡರು.

ಸೂಡ ಪಡುಬೆಟ್ಟು ಭಾಗದಲ್ಲಿ ಕಾರ್ಯಚರಿಸುತ್ತಿರುವ ಕ್ರಷರ್‌ಗಳಿಂದ ನಿತ್ಯ ಸಮಸ್ಯೆಗಳಾಗುತ್ತಿದ್ದು ರಸ್ತೆಯಲ್ಲಿ ಓಡಾಡುವುದೇ ಕಷ್ಟಕರವಾಗಿದೆ. ರಸ್ತೆಯೂ ನಿರ್ಮಾಣಗೊಂಡು ಒಂದೇ ವರ್ಷಕ್ಕೆ ಕೆಟ್ಟು ಹೋಗಿದ್ದು ಈ ಬಗ್ಗೆ ಸೂಕ್ತ ಕ್ರಮದ ಅಗತ್ಯವಿದೆ ಹಾಗೂ ರಸ್ತೆಯುದ್ದಕ್ಕೂ ಘನ ವಾಹನಗಳಿಂದ ಬೀಳುವ ಜಲ್ಲಿ ಹುಡಿಯ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಈ ಬಗ್ಗೆ ಸೂಕ್ರ ಕ್ರಮದ ಕೈಗೊಳ್ಳುವಂತೆ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದರು. ಗನಿ ಮಾಲಿಕರು ಸಮಸ್ಯೆಯ ಬಗ್ಗೆ ಕ್ಯಾರೇ ಎನ್ನದೆ ಉಡಾಫೆಯ ಉತ್ತರವನ್ನು ನೀಡುತ್ತಾರೆ. ಊರಿನ ಜನತೆಗೆ ಸಮಸ್ಯೆಯನ್ನು ತಂದು ಅವರು ಉದ್ಯಮವನ್ನು ನಡೆಸುವುದು ಎಷ್ಟು ಸರಿ? ಕೂಡಲೇ ಗಣಿ ಮಾಲಿಕರನ್ನು ಕರೆದು ಕ್ರಮ ಜರುಗಿಸುವಂತೆ ಗ್ರಾಮಸ್ಥರು ಮನವಿಯನ್ನು ಮಾಡಿಕೊಂಡರು.

ನಿವೇಶನ ಇಲ್ಲದೆ ಸರ್ಕಾರಿ ಜಾಗದಲ್ಲಿ ಕೃಷಿ ಮಾಡಿದವರಿಗೂ ನಳ್ಳಿ ನೀರಿನ ಸಂಪರ್ಕವನ್ನು ಕಲ್ಪಿಸಿದ್ದು ಇದನ್ನು ಕೂಡಲೇ ತೆರವು ಮಾಡುವಂತೆ, ಮತ್ತು ನಂದಳಿಕೆ ಗ್ರಾಮದಲ್ಲಿ ಸಾಕಷ್ಟು ಹೈನುಗಾರರಿದ್ದು ಪಶುವೈದ್ಯರ ಸೇವೆಗಾಗಿ ಪಕ್ಕದ ಗ್ರಾಮವನ್ನು ಅವಲಂಬಿಸಬೇಕಾಗಿದೆ ಅಲ್ಲದೆ ಅಲ್ಲಿನ ವೈದ್ಯರು ಸರಿಯಾಗಿ ಸಿಗುತ್ತಿಲ್ಲ ಹೀಗಾಗಿ ನಂದಳಿಕೆ ಗ್ರಾಮಕ್ಕೊಂದು ಪಶು ಚಿಕಿತ್ಸಾಲಯದ ಅಗತ್ಯವಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ನಂದಳಿಕೆ ಅಬ್ಬನಡ್ಕ ರಸ್ತೆಯೂ ತೀರ ಹದಗೆಟ್ಟಿದ್ದಿ ಕಾಯಕಲ್ಪದ ಅಗತ್ಯದ ಬಗ್ಗೆ ಅಲ್ಲಿನ ನಿವಾಸಿಗಳು ಅಧಿಕಾರಿಗಳ ಗಮನ ಸೆಳೆದರು. ಹಾಗೂ ಬೆರನಬೆನ್ನಿ ಭಾಗದ ರಸ್ತೆಯನ್ನು ಸರಿಪಡಿಸುವಂತೆ ಗ್ರಾಮಸ್ಥರು ವಿನಂತಿಸಿಕೊಂಡರು.

ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಅಧಿಕಾರಿ ರಮೇಶ್ ಉಳ್ಳಗಡ್ಡಿ, ಮೆಸ್ಕಂ ಶಾಖಾಧಿಕಾರಿ ಪ್ರದೀಪ್, ಅರಣ್ಯ ಇಲಾಖಾಧಿಕಾರಿ ಪ್ರಕಾಶ್, ಸಮಾಜ ಕಲ್ಯಾನ ಇಲಾಖೆಯ ಅಧಿಕಾರಿ, ಅರೋಗ್ಯ ಇಲಾಖಾಧಿಕಾರಿ, ಪಂ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕಸ್ತೂರು ವರದಿ ಮಂಡಿಸಿ, ಪಂ.ಅಭಿವೃದ್ದಿ ಅಧಿಕಾರಿ ಮಮತಾ ಶೆಟ್ಟಿ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article