ಸುಬ್ರಹ್ಮಣ್ಯದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ
ಸುಬ್ರಹ್ಮಣ್ಯ: ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಹಾಗೂ ಭಾರತೀಯ ಅಂಚೆ ಇಲಾಖೆಯ ಜಂಟಿ ಆಶ್ರಯದಲ್ಲಿ ಸೆ.29 ಹಾಗೂ 30 ರಂದು ಸೋಮವಾರ ಹಾಗೂ ಮಂಗಳವಾರ ಬೃಹತ್ ಉಚಿತ ಆಧಾರ್ ನೋಂದಣಿ, ತಿದ್ದುಪಡಿ, ಆರೋಗ್ಯ ವಿಮೆ ಹಾಗೂ ಅಪಘಾತ ವಿಮಾ ನೋಂದಣಿ ಶಿಬಿರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ರಾಜೀವ ಗಾಂಧಿ ಸೇವಾ ಸಭಾಭವನದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ತನಕ ನಡೆಯಲಿದೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಆಸು ಪಾಸು ಪ್ರದೇಶಗಳನ್ನೊಳಗೊಂಡ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಪಂಚಾಯತ್ ಪ್ರಕಟಣೆ ತಿಳಿಸಿದೆ.
ಬೇಕಾದ ದಾಖಲೆಗಳು:
18 ವರ್ಷದ ಒಳಗಿನವರಿಗೆ ಹೊಸ ಆಧಾರ್ ನೋಂದಣೆಗೆ ಅವಕಾಶವಿದ್ದು ಮಗುವಿನ ಜೊತೆ ಪೋಷಕರು ಕಡ್ಡಾಯವಾಗಿ ಬರಬೇಕು. ಅಲ್ಲದೆ ಮಗುವಿನ ಜನನ ಪ್ರಮಾಣ ಪತ್ರ ತರಬೇಕು. ಹೆಸರು ತಿದ್ದುಪಡಿಗೆ ಪಾನ್ ಕಾರ್ಡ್, ವೋಡರ್ ಐಡಿ, ಪಾಸ್‌ಪೋರ್ಟ್,ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ ತರಬೇಕು. ಜನ್ಮದಿನಾಂಕ ತಿದ್ದುಪಡಿಗೆ ಪಾಸ್‌ಪೋರ್ಟ್, ಜನನ ಪ್ರಮಾಣ ಪತ್ರ, ಪಿಂಚಣಿ ಪಾವತಿಯ ಆದೇಶದ ಮೂಲಪ್ರತಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸೇವಾ ಗುರುತಿನ ಚೀಟಿ ತರಬೇಕು. ವೋಟರ್ ಐಡಿ, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ವಾಸ್ತವ್ಯ ದೃಡೀಕರಣ ಪತ್ರ ತರಬೇಕು. ಎಲ್ಲಾ ದಾಖಲೆಗಳ ಮೂಲಪ್ರತಿಯನ್ನು ತರಬೇಕು.
ಸಮೀಕ್ಷೆ ಮಾಹಿತಿ ದಾಖಲಿಸಲು ಗ್ರಾ.ಪಂ.ನಲ್ಲಿ ಅವಕಾಶ:
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರು ಮಾಹಿತಿ ದಾಖಲಿಸಲು ಗ್ರಾಮ ಪಂಚಾಯತ್‌ನಲ್ಲೂ ಅವಕಾಶ ಕಲ್ಪಿಸಲಾಗಿದೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನಲ್ಲಿ ಸೆ.29ರಂದು ಸೋಮವಾರ ಬೆಳಗ್ಗೆ 9.30ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಶಿಬಿರ ನಡೆಯಲಿದೆ. ಸಮೀಕ್ಷೆಯಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್, ಪಡಿತರ ಚೀಟಿ, ವೋಟರ್ ಐಡಿ, ಜೊತೆಗೆ ಓಟಿಪಿ ಬರುವಂತಹ ಮೊಬೈಲ್ ತರತಕ್ಕದ್ದು, ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆಯಬೇಕಾಗಿ ಪಿಡಿಒ ಮಹೇಶ್ ಜಿ.ಎನ್. ತಿಳಿಸಿದ್ದಾರೆ.