ತತ್ವಪದಗಳು: ಸಾಂಸ್ಕೃತಿಕ ಅನುಸಂಧಾನ-ರಾಷ್ಟ್ರೀಯ ವಿಚಾರಸಂಕಿರಣ

ತತ್ವಪದಗಳು: ಸಾಂಸ್ಕೃತಿಕ ಅನುಸಂಧಾನ-ರಾಷ್ಟ್ರೀಯ ವಿಚಾರಸಂಕಿರಣ

ಉಜಿರೆ: ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಯೋಗದಲ್ಲಿ ಸೆ.19 ಮತ್ತು 20ರಂದು ‘ತತ್ವಪದಗಳು-ಸಾಂಸ್ಕೃತಿಕ ಅನುಸಂಧಾನ’ ಎಂಬ ವಿಷಯದಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣ ಆಯೋಜಿಸಲಾಗಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಬೋಜಮ್ಮ ಕೆ.ಎನ್. ಮತ್ತು ಸಹಾಯಕ ಪ್ರಾಧ್ಯಾಪಕ ನಾಗಣ್ಣ ಡಿ.ಎ. ತಿಳಿಸಿದ್ದಾರೆ.

ಸೆ.19 ರಂದು ಶುಕ್ರವಾರ ಪೂರ್ವಾಹ್ನ ಗಂಟೆ 10.30ಕ್ಕೆ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ವಿಚಾರಸಂಕಿರಣವನ್ನು ಉದ್ಘಾಟಿಸುವರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸುವರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಶುಭಾಶಂಸನೆ ಮಾಡುವರು.

ಬೆಂಗಳೂರಿನ ಡಾ. ಎಸ್.ಆರ್. ಲಲಿತಾಂಬ, ಗದಗದ ರೇಖಾ ನೀರಲಗಿ, ಕೊಪ್ಪಳದ ಪವನಕುಮಾರ್, ಕೊಪ್ಪಳದ ಜಾಜಿ ದೇವೇಂದ್ರಪ್ಪ, ರಾಯಚೂರಿನ ಎರಿಯಪ್ಪ ಬೆಳಗುರ್ಕಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ, ಮಾರ್ಗದರ್ಶನ ನೀಡುವರು.

ಮೈಸೂರಿನ ಕುಮಾರ್ ಮತ್ತು ಬಳಗದವರು ಹಾಗೂ ಪಾವಗಡದ ಸಣ್ಣೀರಪ್ಪ ಮತ್ತು ಬಳಗದವರು ತತ್ವಪದಗಳನ್ನು ಹಾಡುವರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article