ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ
Sunday, October 12, 2025
ಬಜಪೆ: ಓರಿಯೆಂಟಲ್ ಇನ್ಶೂರೆನ್ಸ್ ಕಂಪೆನಿಯ ನಿವೃತ್ತ ಉದ್ಯೋಗಿ ಮುಂಡಾರುಗುತ್ತು ಪ್ರಶಾಂತ ಆಳ್ವ (69) ಅವರು ಭಾನುವಾರ ಬೆಳಗ್ಗೆ ಮುಂಡಾರುಗುತ್ತು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ಪುತ್ರಿ ಹಾಗೂ ಪುತ್ರನನ್ನು ಆಗಲಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅವರು ಬಜಪೆಯ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಶ್ರೀ ವಿಜಯ ವಿಠಲ ಭಜನ ಮಂದಿರದ ಅಧ್ಯಕ್ಷರಾಗಿ, ಮುಂಡಾರು ಕೋರ್ದಬ್ದು ಸೇವಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.