ವಾಟ್ಸಾಪ್ ಪೋಸ್ಟ್: ಮೂವರ ಬಂಧನ
Sunday, October 12, 2025
ಉಳ್ಳಾಲ: ವಾಟ್ಸಾಪ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಉಳ್ಳಾಲ ನಿವಾಸಿ ಮನೋಜ್, ಮದನಿನಗರ ನಿವಾಸಿ ಹಮೀದ್, ಮಂಗಳೂರು ನಿವಾಸಿ ಫಾರೂಕ್ ಎಂದು ಗುರುತಿಸಲಾಗಿದೆ.
ಇವರು ಭಾರತಕ್ಕೆ ವಿರುದ್ಧವಾಗಿ ಹೇಳಿಕೆಗಳನ್ನು ವಾಟ್ಸಾಪ್‌ನಲ್ಲಿ ವೈರಲ್ ಮಾಡಿದ್ದರು. ಇದನ್ನು ಪರಿಶೀಲಿಸಿದ ಉಳ್ಳಾಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.