ಸಾರ್ವಜನಿಕ ಹಿತಕ್ಕೆ ಅಡ್ಡಿ: ಪ್ರಕರಣ ದಾಖಲು
Friday, October 17, 2025
ಬಂಟ್ವಾಳ: ಇಲ್ಲಿಯ ಮಂಚಿ ಕಟ್ಟೆ ಎಂಬಲ್ಲಿ ಯುವಕರು ಸಾರ್ವಜನಿಕ ವಲಯದಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದು, ಸಾರ್ವಜನಿಕ ಹಿತಕ್ಕೆ ದ್ವೇಷವನ್ನು ಉಂಟು ಮಾಡುವ ದೃಷ್ಠಿಯಿಂದ ಸೌಹಾರ್ದತೆಗೆ ಬಾಧಕವಾಗುವ ರೀತಿಯಲ್ಲಿ ಪರಸ್ಪರವಾಗಿ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು, ಹೊಡೆದಾಡಿಕೊಂಡಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.12 ರಂದು ಬೀಟ್ ಸಂಚಾರದಲ್ಲಿ ಇದ್ದ ಹೆಚ್ಸಿ ಕೃಷ್ಣ ನಾಯ್ಕ ಅವರು ಮಂಚಿ ಕಟ್ಟೆಗೆ ಬಂದ ಸಂದರ್ಭ ಗಲಾಟೆ ಮಾಡುತ್ತಿರುವುದು ಕಂಡುವಂದಿದ್ದು, ಗಲಾಟೆ ಮಾಡುತ್ತಿದ್ದವರನ್ನು ವಿಜೇತ್, ರಕ್ಷಿತ್ ಕೊಟ್ಟಾರಿ, ಪುಷ್ಪರಾಜ್, ಅಜೇಯ್, ಜಮೀರ್, ಮಹಮ್ಮದ್ ಮುಸ್ತಫ್ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.