ಪ್ರಚೋದನಕಾರಿ ಸಂದೇಶ: ಕೇಸು ದಾಖಲು

ಪ್ರಚೋದನಕಾರಿ ಸಂದೇಶ: ಕೇಸು ದಾಖಲು

ಬಂಟ್ವಾಳ: ಇನ್ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಸಂದೇಶ ರವಾನಿಸಿದ ವ್ಯಕ್ತಿಯ ವಿರುದ್ದ ಪೂಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೂಂಜಾಲಕಟ್ಟೆ ಪಿಎಸ್‌ಐ ಅವರು ರಾತ್ರಿ ಗಸ್ತಿನಲ್ಲಿದ್ದಾಗ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ನೋಡುತ್ತಿರುವಾಗ ಆರ್ಥಾ-ಫಾಕ್ಸ್ ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯನ್ನು ಹೊಂದಿರುವ ವ್ಯಕ್ತಿಯು ತನ್ನ ಖಾತೆಯಲ್ಲಿ ಜಾತಿಯ ಅಥವಾ ಸಮುದಾಯಗಳ ನಡುವೆ ಪ್ರಚೋದಿಸುವ, ವೈಮನಸ್ಸು ಉಂಟಾಗುವಂತೆ ಹಾಗೂ ಸಂಘರ್ಷ ಉಂಟು ಮಾಡುವ ಉದ್ದೇಶವನ್ನು ಹೊಂದಿ ತನ್ನ ಖಾತೆಯಿಂದ ಪೋಸ್ಟ್ ಮಾಡಿರುವುದು ಕಂಡು ಬಂದಿದೆ.

ಈತ ಮಾಡಿದ ಪ್ರಸಾರದಿಂದ ಉದ್ದೇಶ ಪೂರ್ವಕವಾಗಿ ಒಂದು ವರ್ಗವನ್ನು ಅಥವಾ ಸಮುದಾಯವನ್ನು ಪ್ರಚೋದಿಸುವ ಪೋಸ್ಟರ್ ಆಗಿರುವುದಾಗಿದೆ. 

ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article