ಬೈಕ್‌ನಲ್ಲಿ ಗಾಂಜಾ ಸಾಗಾಟ: ಇಬ್ಬರ ಬಂಧನ
ಬಂಟ್ವಾಳ: ಬೈಕಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬೇಧಿಸಿದ್ದು,ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಬ್ದುಲ್ ಸಾದಿಕ್ ಹಾಗೂ ಅಬ್ದುಲ್ ಮಜೀದ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಮತ್ತವರ ಸಿಬ್ಬಂದಿಗಳು ಭಾನುವಾರ ಬೆಳಗ್ಗೆ ಸುಮಾರು 11.50 ಗಂಟೆಗೆ ಗೂಡಿನಬಳಿಯಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ
ಪಾಣೆಮಂಗಳೂರು ಕಡೆಯಿಂದ ಬಿ.ಸಿ. ರೋಡಿನತ್ತ ಬೈಕಿನಲ್ಲಿ ಇಬ್ಬರು ಹೆಲ್ಮೆಟ್ ಧರಿಸದೆ ಬರುತ್ತಿರುವುದನ್ನು ಗಮನಿಸಿ ಅನುಮಾನದಿಂದ ಪೊಲೀಸರು ಬೈಕ್ ನಿಲ್ಲಿಸುವಂತೆ ಸೂಚಿಸಿದರು.
ಆದರೆ ಸವಾರರು ಬೈಕ್ ನಿಲ್ಲಿಸದೆ ಗೂಡಿನಬಳಿ ಮಸೀದಿ ರಸ್ತೆಯತ್ತ ತಿರುಗಿಸಿದ್ದಾರೆ.
ಬೈಕ್ ಸವಾರ ಮತ್ತು ಹಿಂಬದಿ ಸವಾರನ ಮದ್ಯದಲ್ಲಿ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ ಇದ್ದು, ಇನ್ನಷ್ಟು ಅನುಮಾನಿತರಾದ ಪೊಲೀಸರು ಬೈಕನ್ನು ಅಲ್ಲಿ ತಡೆದು ನಿಲ್ಲಿಸಿ ಸವಾರರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸವಾರರು ಅಬ್ದುಲ್ ಸಾಧಿಕ್ ಹಾಗೂ ಸವಾರ ಅಬ್ದುಲ್ ಮಜೀದ್ ಎಂದು ತಿಳಿದು ಬಂದಿದೆ.