ಕನಿಷ್ಠಕೂಲಿ, ತುಟ್ಟಿಭತ್ತೆ ಪಾವತಿಸುವಂತೆ ಆಗ್ರಹಿಸಿ ಬೀಡಿಕಾರ್ಮಿಕರ ಪ್ರತಿಭಟನೆ

ಕನಿಷ್ಠಕೂಲಿ, ತುಟ್ಟಿಭತ್ತೆ ಪಾವತಿಸುವಂತೆ ಆಗ್ರಹಿಸಿ ಬೀಡಿಕಾರ್ಮಿಕರ ಪ್ರತಿಭಟನೆ


ಬಂಟ್ವಾಳ: ಕನಿಷ್ಠಕೂಲಿ, ತುಟ್ಟಿಭತ್ತೆ ಪಾವತಿಸುವಂತೆ ಆಗ್ರಹಿಸಿ ಎಐಟಿಯುಸಿ ಮತ್ತು ಸಿಐಟಿಯು ಜಂಟಿ ಸಂಘಟನೆಗಳ ನೇತೃತ್ವದಲ್ಲಿ ಹಕ್ಕೊತ್ತಾಯ ಚಳುವಳಿ ಬಿ.ಸಿ. ರೋಡಿನ ಭಾರತ್ ಬೀಡಿ ಕಂಪೆನಿಯ ಮುಂಭಾಗದಲ್ಲಿ ಮಂಗಳವಾರ ನಡೆಯಿತು.

2018 ರಿಂದ 2024ರ ವರೆಗಿನ ಆರು ವರ್ಷಗಳ ಕನಿಷ್ಠ ಕೂಲಿ ಹಾಗೂ 2024 ರಿಂದ ಅಧಿಸೂಚಿಸಿದ ಕನಿಷ್ಠ ಕೂಲಿ ಮತ್ತು ತುಟ್ಟಿಭತ್ತೆಯನ್ನು ಬೀಡಿ ಕಾರ್ಮಿಕರಿಗೆ ಪಾವತಿಸುವಂತೆ ಈ ಸಂದರ್ಭ ಪ್ರತಿಭಟನಾಕಾರರು ಆಗ್ರಹಿಸಿದರು.

ಎಐಟಿಯುಸಿ ಜಿಲ್ಲಾ ಕಾರ‍್ಯದರ್ಶಿ ಸೀತರಾಮ ಬೇರಿಂಜ, ಸಿಐಟಿಯು ಜಿಲ್ಲಾ ಮುಖಂಡ ಜೆ. ಬಾಲಕೃಷ್ಣ ಶೆಟ್ಟಿ, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್ ಮಾತನಾಡಿದರು.

ಎಐಟಿಯುಸಿನ ಹಿರಿಯ ಮುಂದಾಳು ವಿ. ಕುಕ್ಯಾನ್, ಜಿಲ್ಲಾ ಸಹಕಾರ‍್ಯದರ್ಶಿ ಕರುಣಾಕರ ಮಾರಿಪಳ್ಳ, ಉಮವತಿ ಕುರ್ನಾಡು, ಹರ್ಷಿತ್, ಎಂ.ಬಿ.ಭಾಸ್ಕರ, ಶಮಿತ, ಭಾರತಿ ಪ್ರಶಾಂತ್, ಕೆ. ಜಯಮತ, ಮೋಹನ ಅರಳ, ಸರೋಜಿನಿ, ಯೋಗಿನಿ, ಕುಸುಮ ಕಳ್ಳಿಗೆ, ಮೋಹಿನಿ, ಸಿಐಟಿಯುನ ಲೋಲಾಕ್ಷಿ, ಉದಯ ಕುಮಾರ್, ಜಯಂತ. ನಾರಾಯಾಣ ಮತ್ತಿತರರು ಉಪಸ್ಥಿತರಿದ್ದರು.

ಎಐಟಿಯುಸಿ ಜಿಲ್ಲಾ ಸಹಕಾರ‍್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಪ್ರಸ್ತಾವಿಸಿ, ಸ್ವಾಗತಿಸಿದರು. ಸಿಐಟಿಯುನ ಉದಯ ಕುಮಾರ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article