ಆರ್ಕಿಡ್ ಪ್ರದರ್ಶನ: ಸುಪ್ರಿಯಾ ಹರ್ಷೇಂದ್ರ ಕುಮಾರ್‌ರವರಿಗೆ ಬಹುಮಾನ

ಆರ್ಕಿಡ್ ಪ್ರದರ್ಶನ: ಸುಪ್ರಿಯಾ ಹರ್ಷೇಂದ್ರ ಕುಮಾರ್‌ರವರಿಗೆ ಬಹುಮಾನ


ಉಜಿರೆ: ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ ಮತ್ತು ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಆಯೋಜಿಸಿದ ಆರ್ಕಿಡ್ ಪ್ರದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದಾರೆ.


ಪ್ಯಾಫಿಯೋಪೆಡಿಲಮ್ ಆರ್ಕಿಡ್ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ.

ಕಳೆದ 5-6 ವರ್ಷಗಳಿಂದ ಆರ್ಕಿಡ್ ಗಿಡಗಳನ್ನು ಸಂಗ್ರಹಿಸಿಸುವ ಹವ್ಯಾಸ ಹೊಂದಿರುವ ಸುಪ್ರಿಯಾ ಹರ್ಷೇಂದ್ರ ಕುಮಾರ್ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ಆರ್ಕಿಡ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಬಹುಮಾನ ಪಡೆದ ಸಂಭ್ರಮದಲ್ಲಿ ಮಾತನಾಡಿದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು, ‘ನಾನು ಇದನ್ನು ನಿರೀಕ್ಷಿಸಿಯೇ ಇರಲಿಲ್ಲ. ಸಾಮಾನ್ಯವಾಗಿ ಸ್ಲಿಪರ್ ಆರ್ಕಿಡ್ಸ್ ಎಂದು ಕರೆಯಲ್ಪಡುವ, ಲೇಡೀಸ್ ಶೂಸ್‌ನಂತೆ ಕಾಣುವ ವಿಶೇಷ ತಳಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದು ಆರ್ಕಿಡ್‌ಗಳಲ್ಲೇ ಪ್ರಮುಖವಾದುದಾಗಿದೆ. ನನ್ನ ಸಂಗ್ರಹದ ಕೆಲವು ಆರ್ಕಿಡ್‌ಗಳನ್ನು ಪ್ರದರ್ಶನ ಮಾಡಿ, ಇಲ್ಲಿನ ಶೋವನ್ನು ವೀಕ್ಷಿಸುವ ಆಸಕ್ತಿ ಹೊಂದಿದ್ದೆ. ಬಹುಮಾನ ದೊರೆತಿದ್ದು, ಅತೀವ ಸಂತೋಷವಾಗಿದೆ. ಮನೆಯವರನ್ನೂ ಕೂಡ ಈ ಆರ್ಕಿಡ್ ಪ್ರದರ್ಶನಕ್ಕೆ ಕರೆದುಕೊಂಡು ಬಂದಿದ್ದೇನೆ’ ಎಂದರು.

ಬೇರೆ ಬೇರೆ ಜಾತಿಯ 2500ಕ್ಕೂ ಹೆಚ್ಚು ಗಿಡಗಳ ಸಂಗ್ರಹ ಹೊಂದಿರುವ ಸುಪ್ರಿಯಾ ಹರ್ಷೇಂದ್ರ ಕುಮಾರ್ ಎಲ್ಲೇ ಹೋದರೂ ಗಿಡಗಳ ಬಗ್ಗೆ ಬಹಳ ಆಸಕ್ತಿ ತೋರುತ್ತಾರೆ. ಬೇರೆ-ಬೇರೆ ಕಡೆಗಳಿಗಳಿಗೆ ಭೇಟಿ ನೀಡಿದಾಗ ಹೊಸ ಹೊಸ ತಳಿಯ ಗಿಡಗಳನ್ನು ಸಂಗ್ರಹಿಸುವುದು ಅವರ ಇಷ್ಟದ ಹವ್ಯಾಸ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article