ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ತನಿಖಾ ವರದಿಗೆ ಕೋರ್ಟ್ ನೋಟಿಸ್

ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ತನಿಖಾ ವರದಿಗೆ ಕೋರ್ಟ್ ನೋಟಿಸ್

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಸಲಾದ ಷಡ್ಯಂತ್ರದ ಬಗ್ಗೆ ತೇಜಸ್ ಗೌಡ ಮತ್ತು ಇತರರು ವಿಶೇಷ ತನಿಖಾ ದಳ (ಎಸ್‌ಐಟಿ)ಕ್ಕೆ ವಿವಿಧ ದಿನಾಂಕಗಳಲ್ಲಿ ಅರ್ಜಿಯನ್ನು ಸಲ್ಲಿಸಿದ್ದು ಅನೇಕ ದೂರುಗಳನ್ನು ನೀಡಿರುತ್ತಾರೆ. 

ಈ ದೂರಿಗೆ ಸಂಬಂಧಿಸಿದಂತೆ ಈ ಅರ್ಜಿದಾರರು ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದು ಇಂದು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ಇವರ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ಎಸ್‌ಐಟಿ ಇಡಿ ಮತ್ತು ಆದಾಯ ತೆರಿಗೆ ಸೇರಿದಂತೆ ಏಳು ಪ್ರತಿವಾದಿಗಳಿಗೆ ಈ ದೂರಿಗೆ ಸಂಬಂಧಿಸಿದಂತೆ ನಡೆದಿರುವ ತನಿಖಾ ವರದಿಯನ್ನು ಸಲ್ಲಿಸುವಂತೆ  ನೋಟಿಸ್ ಅನ್ನು ಜಾರಿ ಮಾಡಿದೆ

ತೇಜಸ್ ಗೌಡ ಅವರು ತಮ್ಮ ದೂರಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಹೆಸರಲ್ಲಿ ಹೋರಾಟವನ್ನು ಮಾಡುತ್ತಿದ್ದು ಆ ಹೋರಾಟಕ್ಕೆ ವಕೀಲರಿಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ ಎಂದು ಹೇಳಿಕೆ ನೀಡಿರುತ್ತಾರೆ. ಜೊತೆಗೆ ಈ ಹೋರಾಟದಲ್ಲಿ ತೊಡಗಿಸಿಕೊಂಡ ಸೌಜನ್ಯ ತಾಯಿಯು ಸೇರಿದಂತೆ ಪ್ರತಿಯೊಬ್ಬರು ಹೋರಾಟದ ಸಮಯದಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿಯನ್ನು ಖರೀದಿಸಿರುತ್ತಾರೆ ಅಲ್ಲವೇ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವರದಿ ಮಾಡಲು ದುಡ್ಡನ್ನು ಪಡೆದಿದ್ದು ಅವರ ವರದಿಗಳು ಪೇಡ್ ಪ್ರಮೋಷನ್ ರೀತಿ ಎಲ್ಲೆಡೆ ಪ್ರಚಾರಗೊಂಡಿದೆ ಇದಕ್ಕೆ ಬೇಕಾದ ಸಂಪನ್ಮೂಲಗಳನ್ನು ಮಹೇಶ್ ಶೆಟ್ಟಿ ಮತ್ತು ಇತರರು ಎಲ್ಲಿಂದ ಹೊಂದಿಸಿಕೊಂಡರು ಎಂದು ತನಿಖೆ ಮಾಡಬೇಕೆಂದು ಎಸ್‌ಐಟಿಯನ್ನು ಕೋರಿಕೊಂಡಿದ್ದರು.

ಇನ್ನೊಬ್ಬ ಅರ್ಜಿದಾರ ದನ ಕೀರ್ತಿಯವರು ತಮ್ಮ ದೂರಿನಲ್ಲಿ ಯೂಟ್ಯೂಬರ್ ಕುಡ್ಲ ರಾಮ್ ಪೇಜ್ ಎನ್ನುವವರು ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಷಡ್ಯಂತ್ರ ಪೂರಿತ ವರದಿಗಳನ್ನು ಪ್ರಸಾರ ಮಾಡುತ್ತಿದ್ದು ಅದಕ್ಕೆ ಯಾವುದು ಮೂಲ ಎಂದು ತನಿಖೆ ಮಾಡಬೇಕು ಹಾಗೂ ಎಸ್‌ಐಟಿ ತನಿಖೆ ಸಮಯದಲ್ಲಿ ದಿನನಿತ್ಯ ತನ್ನದೇ ತನಿಖಾ ವರದಿಯನ್ನು ಎಸ್‌ಐಟಿಯ ತನಿಖಾ ವರದಿ ಎಂಬ ರೀತಿಯಲ್ಲಿ ಬಿಂಬಿಸಿ ಪ್ರಸಾರ ಮಾಡುತ್ತಿದ್ದರು ಈ ರೀತಿ ಪ್ರಸಾರ ಮಾಡಲು ಅವರಿಗೆ ವರದಿಯ ಮೂಲ ಯಾವುದು? ಅವರು ಎಸ್‌ಐಟಿಯಿಂದ ಮತ್ತು ಎಸ್‌ಐಟಿಯ ಯಾವ ಮೂಲದಿಂದ ಈ ಮಾಹಿತಿಗಳನ್ನು ಪಡೆಯಲು ಸಾಧ್ಯವಾಯಿತು ಎಂದು ಎಸ್‌ಐಟಿ ತಿಳಿಸುವಂತೆ ಕೋರಿದ್ದರು.

ವಿಠಲ ಗೌಡ ಎನ್ನುವವರು ಹಿಂದೆ ಹೋಟೆಲು ನಡೆಸುತ್ತಿರುವಾಗ ಜೊತೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಕಾರ್ಮಿಕನನ್ನು ದಾರುಣವಾಗಿ ಕೊಲೆ ಮಾಡಿದ್ದು ಆ ಕೇಸ್ ಅನ್ನು ಮುಚ್ಚಿ ಹಾಕಲಾಗಿದೆ ಅದಕ್ಕೆ ಸಂಬಂಧಿಸಿದ ಕೆಲ ದಾಖಲಾತಿಗಳನ್ನು ಎಸ್‌ಐಟಿಗೆ ಸಲ್ಲಿಸಿರುತ್ತಾರೆ. ಇದರ ಬಗ್ಗೆ ಎಸ್‌ಐಟಿಯು ಕೂಲಂಕುಶವಾಗಿ ತನಿಖೆ ಮಾಡಬೇಕೆಂದು ಕೋರಿರುತ್ತಾರೆ 

ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಕರ್ನಾಟಕ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದು ಇದನ್ನು ಸ್ವೀಕರಿಸಿದ ನ್ಯಾಯಾಲಯವು 7 ಜನ ಪ್ರತಿವಾದಿಗಳಿಗೆ ನೋಟಿಸು ಜಾರಿ ಮಾಡಿದೆ ಮತ್ತು ತಕ್ಷಣ ವರದಿ ಸಲ್ಲಿಸುವಂತೆ ಸೂಚಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article