ಕಾಮನ್ವೆಲ್ತ್ ಸಂಸದೀಯ ಸಮಾವೇಶದಲ್ಲಿ ಸ್ಪೀಕರ್ ಭಾಗಿ

ಕಾಮನ್ವೆಲ್ತ್ ಸಂಸದೀಯ ಸಮಾವೇಶದಲ್ಲಿ ಸ್ಪೀಕರ್ ಭಾಗಿ


ಮಂಗಳೂರು: ಕೆರೆಬಿಯನ್ ಪೂರ್ವ ದ್ವೀಪ ರಾಷ್ಟ್ರವಾಗಿರುವ ಬ್ರಿಟಿಷ್ ಕಾಮನ್ವೆಲ್ತ್ ಗಣರಾಜ್ಯವಾಗಿರುವ ಬಾಬ್ರ್ಡೋಸ್ ದೇಶದ ರಾಜಧಾನಿ ಬ್ರಿಜ್ಡಟೌನ್ ನಗರದಲ್ಲಿ ಅ.6 ರಿಂದ ಆರಂಭಗೊಂಡಿರುವ “68 ನೇ ಕಾಮನ್ವೆಲ್ತ್ ಸಂಸದೀಯ ಸಮಾವೇಶ”ದಲ್ಲಿ ಲೋಕಸಭಾಧ್ಯಕ್ಷ ಒಂ ಬಿರ್ಲಾ, ರಾಜ್ಯಸಭೆಯ ಉಪಸಭಾಪತಿ ಹರಿವಂಶ, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮತ್ತಿತರರು ಪಾಲ್ಗೊಂಡಿದ್ದಾರೆ.

ಸಮಾವೇಶದಲ್ಲಿ ಜಗತ್ತಿನ ವಿವಿಧ ದೇಶಗಳ ಪ್ರತಿನಿಧಿಗಳು, ಲೋಕಸಭಾಧ್ಯಕ್ಷರು, ರಾಜ್ಯಸಭೆಯ ಉಪ ಸಭಾಪತಿಗಳು, ವಿವಿಧ ರಾಜ್ಯಗಳ ವಿಧಾನ ಸಭೆ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು, ಸಚಿವರುಗಳು, ರಾಜಕೀಯ ತಜ್ಞರು, ನೀತಿ ನಿರೂಪಕರು, ರಾಜಕೀಯ ಮುತ್ಸದ್ದಿಗಳು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article