ಪಶ್ಚಿಮ ಘಟ್ಟಕ್ಕೂ ಗ್ರಾಮೀಣ ಪ್ರದೇಶಕ್ಕೂ ಗಡಿ ಗುರುತು ಮಾಡಲು ಒತ್ತಾಯ
ವೇದಿಕೆಯಲ್ಲಿ ಜಯಪ್ರಕಾಶ್ ಕೂಜುಗೋಡು, ಆಶೋಕ್ ಮೂಲೆಮಜಲು, ರಮಾನಂದ ಎಣ್ಣೆಮಜಲು, ಈಶ್ವರ ಅರಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಹಲವಾರು ರೈತರು ಭಾಗವಹಿಸಿದ್ದರು. ಸಭೆಯಲ್ಲಿ ಈ ಕೆಳಗಿನ ನಿರ್ಣಯ ಕೈಗೊಳ್ಳಲಾಯಿತು.
ಪಶ್ಚಿಮ ಘಟ್ಟಕ್ಕೂ ಗ್ರಾಮೀಣ ಪ್ರದೇಶಕ್ಕೂ ಗಡಿ ಗುರುತು ಮಾಡುವುದು, ರೈತರ ಸ್ವಾದೀನದಲ್ಲಿರುವ ಮನೆ, ಕೃಷಿ ಮತ್ತಿತರರ ಎಲ್ಲಾ ಭೂಮಿಗೆ ಹಕ್ಕು ಪತ್ರ ಕೊಡುವಂತೆ.ಕಾಡು ಪ್ರಾಣಿಗಳಿಂದ ಕೃಷಿಕರನ್ನು ಮತ್ತು ಕೃಷಿ ಭೂಮಿಯನ್ನು ರಕ್ಷಿಸಲು ಕೋವಿ ಪರವಾನಿಗೆ ನೀಡುವಂತೆ, ಅರಣ್ಯ ವಿಸ್ತರಿತ ಭೂಮಿಯನ್ನು ಕಾದಿರಿಸು ಮುಂಚಿತವಾಗಿ ರೈತರ ಮೂಲಭೂತ ಸೌಕರ್ಯದ ಭೂಮಿ ಕಾದಿರಿಸಿದ ನಂತರ ಅರಣ್ಯ ಸಂರಕ್ಷಣೆ ಯೋಜನೆ ರೂಪಿದುವುದು. ಅರಣ್ಯ ಇಲಾಖೆಗೆ ಬರುವ ಪರಿಸರ ಸಂರಕ್ಷಣೆಯ, ಅಭಿವೃದ್ಧಿಗೆ ಬರುವ ಸರ್ಕಾರದ ಅನುದಾನ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳ ಗಮನಕ್ಕೆ ತಂದು ಅನುಷ್ಠಾನ ಮಡುವಂತೆ ನಿರ್ಣಯಿಸಲಾಯಿತು. ಜಾಗವನ್ನು ಜಂಟಿ ಸರ್ವೆ ನಡೆಸಿ ಭಾಗಶಃ ಅರಣ್ಯ ಬರುವ ಸಮಸ್ಯೆ ಬಗೆಹರಿಸಿ, ಪ್ಲಾಟಿಂಗ್ ಆಗದ ಜಾಗವನ್ನು ಪ್ಲಾಟಿಂಗ್ ಮಾಡಿಸಿ ಕೊಡಬೇಕು. ಅಲ್ಲದೆ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಹಕ್ಕೊತ್ತಾಯ ನವಂಬರ್ 15ರಂದು ಸಭೆ ನಡೆಸುವುದು, ಅಲ್ಲಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದು ಮನವಿ ಸ್ವೀಕರಿಸಿ ಸ್ಪಂದಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ಮುಂದುವರೆಸುವಾಗಿ ನಿರ್ಣಯಿಸಲಾಗಿದೆ.