ಡಿವೈಎಫ್‌ಐ ನಾಯಕಿ ಆತ್ಮಹತ್ಯೆ: ವಕೀಲ ಸೆರೆ
ಕಾಸರಗೋಡು: ನಾಲ್ಕು ದಿನಗಳ ಹಿಂದೆ ಕುಂಬಳೆಯಲ್ಲಿ ತನ್ನ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಡಿವೈಎಫ್‌ಐ ನಾಯಕಿ, ಯುವ ವಕೀಲೆ ರಂಜಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಎನ್ನಲಾದ ವಕೀಲನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ತಿರುವಲ್ಲ ಮೂಲದ ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ರಾಜಧಾನಿ ತಿರುವನಂತಪುರಂನಲ್ಲಿ ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ವಕೀಲನನ್ನು ಬಂಧಿಸಲಾಗಿದೆ. ಅನಿಲ್ ಕುಮಾರ್ ಅವರು ರಂಜಿತಾ ಅವರ ಸ್ನೇಹಿತನಾಗಿದ್ದು ಈ ಬಗ್ಗೆ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದರು. ಅಲ್ಲದೆ, ಆಕೆಯ ಮೊಬೈಲನ್ನೂ ವಶಕ್ಕೆ ಪಡೆದು ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಡಿವೈಎಫ್‌ಐ ಕುಂಬಳೆ ಸಮಿತಿ ಅಧ್ಯಕ್ಷೆಯಾಗಿದ್ದ ರಂಜಿತಾ ಅವರು ಸಿಪಿಎಂ ಸದಸ್ಯರೂ ಆಗಿದ್ದರು. ಇವರು ದಿಢೀರ್ ಎನ್ನುವಂತೆ ಸೆಪ್ಟೆಂಬರ್ 30 ರಂದು ಕುಂಬಳೆಯಲ್ಲಿರುವ ತಮ್ಮ ವಕೀಲರ ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು. ರಂಜಿತ್ ಸಿಪಿಐ(ಎಂ) ಕುಂಬಳ ಸ್ಥಳೀಯ ಸಮಿತಿಯ ಸದಸ್ಯೆ, ಡಿವೈಎಫ್‌ಐ ಪ್ರಾದೇಶಿಕ ಸಮಿತಿ ಅಧ್ಯಕ್ಷೆಯಾಗಿದ್ದರು. ರಂಜಿತಾ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಪ್ರಕರಣ ತನಿಖೆ ಮುಂದುವರೆಸಿದ ಪೊಲೀಸರು ರಂಜಿತಾ ಬಳಸುತ್ತಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದರು. ರಂಜಿತಾ ದಿಢೀರ್ ಆತ್ಮಹತ್ಯೆ ಮಾಡಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.