1.10 ಕೋಟಿ ಮೊತ್ತದ ಕಾಮಗಾರಿಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಗುದ್ದಲಿ ಪೂಜೆ
ಹಾಗೆಯೇ ಪಂಚಾಯತ್ ಅನುದಾನದಲ್ಲಿ ಸೌಹಾರ್ದ ನಗರ ಶಾಲಾ ಮೈದಾನದಲ್ಲಿ ಹೈ ಮಾಸ್ಕ್ ಲೈಟಿನ ಉದ್ವಾಟನೆ ಮತ್ತು ಸೌಹಾರ್ದ ನಗರ ಮಸೀದಿ ಬಳಿ 1.50 ಲಕ್ಷದ ರಸ್ತೆ ಕಾಂಕ್ರೀಟಿಕರಣದ ಮತ್ತು ಸೌಹಾರ್ದನಗರ ನಾಗೇಶ್ ಮನೆಬಳಿಯಿಂದ ಜಯಂತ್ ಮನೆ ಬಳಿ ತನಕ 4.44 ಲಕ್ಷ ಅನುದಾನದ ರಸ್ತೆ ಕಾಂಕ್ರೀಟಿಕರಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿದರು.
ಸೌಹರ್ದ ನಗರ ಗರಡಿ ಮನೆಗೆ ಗ್ರಾಮ ವಿಕಾಸ ಯೋಜನೆಯಡಿಯ ಉಳಿಕೆ ಕಾಮಗಾರಿ ಅನುದಾನದಲ್ಲಿ 3 ಲಕ್ಷ 7 ಸಾವಿರದ ಗರಡಿ ಮನೆಗೆ ವಿದ್ಯುತ್ ಉಪಕರಣ, ಶೀಟ್ ಅಳವಡಿಕೆ, ಗರಡಿ ಮನೆಗೆ ಬೇಕಾದ ಪರಿಕರಗಳು ನೀಡುವ ಕಾರ್ಯಕ್ರಮವೂ ಈ ವೇಳೆ ನಡೆಯಿತು.
ಈ ಸಂದರ್ಭ ಪಂಚಾಯತ್ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಉದಯ ಆರ್. ರಾವ್, ಸದಸ್ಯರು, ಶಕ್ತಿ ಕೇಂದ್ರದ ಅಧ್ಯಕ್ಷರು ಕಾರ್ಯದರ್ಶಿ ಮತ್ತು ಸದಸ್ಯರು, ಮಂಡಲದ ಉಪಾಧ್ಯಕ್ಷರುಗಳಾದ ಅಮ್ರತ್ ಲಾಲ್, ಜೋಯ್ಸ್ ಡಿಸೋಜ, ಮಂಡಲದ ರೈತ ಮೋರ್ಚ ಅಧ್ಯಕ್ಷ ಸುಕೇಶ್ ಮಾಣೈ, ಮಹಾಶಕ್ತಿಕೇಂದ್ರದ ಅಧ್ಯಕ್ಷ ಶೋಧನ್ ಅದ್ಯಪಾಡಿ, ಕಾರ್ಯದರ್ಶಿ ತಮ್ಮಯ ಪೂಜಾರಿ, ಬೂತಿನ ಅಧ್ಯಕ್ಷ ಕಾರ್ಯದರ್ಶಿ ಮತ್ತು ಸದಸ್ಯರು ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರು, ಊರಿನ ನಾಗರಿಕರು ಉಪಸ್ಥಿತರಿದ್ದರು.