ಅ.12 ರಂದು ಅಮೃತ ಭಕ್ತಿ ಸುಧಾ ಸಂಗೀತ-ಭಕ್ತಿಗೀತೆಗಳು
Friday, October 10, 2025
ಮಂಗಳೂರು: ಮಂಗಳೂರಿನ ರಾಮಕೃಷ್ಣ ಮಿಷನ್ ಸಂಸ್ಥೆಯ ಅಮೃತ ವರ್ಷ 25 ರ ಸಂಭ್ರಮಾಚರಣೆ ಅಂಗವಾಗಿ ‘ಅಮೃತ ಭಕ್ತಿ ಸುಧಾ’ ಎಂಬ ಭಕ್ತಿ ಗಾಯನ ಕಾರ್ಯಕ್ರಮವನ್ನು ಅ.12 ರಂದು ಸಂಜೆ 5 ಗಂಟೆಯಿಂದ 7.30 ರವರೆಗೆ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಖ್ಯಾತ ಗಾಯಕಿ ಮೇಧಾ ವಿದ್ಯಾಭೂಷಣ ಅವರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಸಂಗೀತ ಕಾರ್ಯಕ್ರಮದ ಮೊದಲು ಸಂಜೆ 5 ಗಂಟೆಯಿಂದ 5.30 ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕಿನ ಸರ್ಕಲ್ ಹೆಡ್‌ನ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಬಿ. ಸಿಂಗಾಯಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮಂಗಳೂರಿನ ರಾಮಕೃಷ್ಣ ಮಠದ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸೇನಾಧಿಕಾರಿ ಕ್ಯಾ. ಗಣೇಶ್ ಕಾರ್ನಿಕ್ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.