ಅ.19 ರಂದು ಕಾಮ್ರೇಡ್ ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರ ಉದ್ಘಾಟನೆ

ಅ.19 ರಂದು ಕಾಮ್ರೇಡ್ ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರ ಉದ್ಘಾಟನೆ


ಮಂಗಳೂರು: ಗಡಿನಾಡ ಪ್ರದೇಶವಾದ  ವರ್ಕಾಡಿ ಪಂಚಾಯತ್ ನ ವ್ಯಾಪ್ತಿಯ ಕೊಡ್ಲಮೊಗರು ಪ್ರದೇಶದಲ್ಲಿ ದುಡಿಯುವ ವರ್ಗದ ಆಶಾಕಿರಣವಾಗಿ ಹೊರಹೊಮ್ಮಿದ CPIM ಪಕ್ಷದ ಕಚೇರಿಯಾಗಿ ನಿರ್ಮಾಣಗೊಂಡ ಕಾಮ್ರೇಡ್ ಫಕೀರ ಶೆಟ್ಟಿಗಾರ್ ಸ್ಮಾರಕ ಮಂದಿರದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 19ರಂದು ಬೆಳಗ್ಗೆ 10 ಗಂಟೆಗೆ ದೈಗೋಳಿ ಜಂಕ್ಷನ್ ನಲ್ಲಿ ನಡೆಯಲಿದೆ ಎಂದು ಕಟ್ಟಡ ನಿರ್ಮಾಣಕ್ಕಾಗಿ ರಚಿಸಿದ ಕಟ್ಟಡ ಸಮಿತಿ ಹಾಗೂ ಸ್ವಾಗತ ಸಮಿತಿಯು ಜಂಟಿ ಹೇಳಿಕೆ ನೀಡಿದೆ.

ದುಡಿಯುವ ವರ್ಗದ ಚಳುವಳಿಗಾಗಿ ಅವಿಶ್ರಾಂತವಾಗಿ ಶ್ರಮಿಸಿ, ತನ್ನ ಜೀವನವನ್ನೇ ಕಾರ್ಮಿಕ ವರ್ಗದ ಹಿತಕ್ಕಾಗಿ ಮುಡಿಪಾಗಿಸಿದ, ಹಲವಾರು ವರ್ಷಗಳ ಕಾಲ ಕೊಡ್ಲಮೊಗರು  ಲೋಕಲ್ ಸಮಿತಿ ಕಾರ್ಯದರ್ಶಿಯಾಗಿ ಸೇವೆಗೈದ ಕಾಂ. ಕೆ. ಪಕೀರ ಶೆಟ್ಟಿಗಾರ್ ರವರ ನೆನಪಿನಲ್ಲಿ ನಿರ್ಮಾಣಗೊಂಡ ಕಟ್ಟಡದ ಉಧ್ಘಾಟನೆಯನ್ನು CPIM ಪಕ್ಷದ ರಾಜ್ಯ ಕಾರ್ಯದರ್ಶಿಗಳೂ ಹಾಗೂ ಮಾಜಿ ಸಚಿವರಾದ ಎಂ.ವಿ. ಗೋವಿಂದನ್ ಮಾಸ್ಟರ್ ರವರು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ CPIM ರಾಜ್ಯ ಸಮಿತಿ ಸದಸ್ಯರಾದ ಕೆ. ಪಿ. ಸತೀಶ್ ಚಂದ್ರನ್, ಶಾಸಕರಾದ C H ಕುಂಞಂಬು, CPIM ಜಿಲ್ಲಾ ಕಾರ್ಯದರ್ಶಿಗಳೂ, ಶಾಸಕರಾದ M ರಾಜಗೋಪಾಲನ್, CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ K.V ಕುಂಞರಾಮನ್, V V. ರಮೇಶನ್,K R ಜಯಾನಂದ,V. P. P ಮುಸ್ತಾಫಾ, CPIM  ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್, ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ. ಎಸ್ ಮೊದಲಾದವರು ಭಾಗವಹಿಸಲಿದ್ದಾರೆ.

ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ವೈವಿಧ್ಯಮಯ ಚಟುವಟಿಕೆಗಳನ್ನೊಳಗೊಂಡ ಸಾಂಸ್ಕೃತಿಕ ಉತ್ಸವವು ಜರುಗಲಿದೆ.ಆದ್ದರಿಂದ ಈ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ಜನತೆ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸ್ವಾಗತ ಸಮಿತಿ ಚೆಯರ್ ಮೆನ್ ಮೋಹನ ಬಿ. ಮತ್ತು ಕನ್ವೀನರ್ ಜಯರಾಮ ಎನ್. ಕೆ.ಯವರು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article