ಕೃಷಿ ಬದುಕು ಋಷಿ ಬದುಕಿಗೆ ಸಮ: ಡಾ. ನಾಗರಾಜ ಶೆಟ್ಟಿ
Thursday, October 16, 2025
ಮೂಡುಬಿದಿರೆ: ಮಣ್ಣಿನ ಕಣಕಣದಲ್ಲೂ ಅಂತರ್ಯಾಮಿಯಾಗಿರುವ ಸತ್ಯ ಸತ್ವವನ್ನು ಅರ್ಥೈಸಿಕೊಂಡು ತೊಡಗಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಿದ್ದ. ಕೃಷಿ ಬದುಕಿನಲ್ಲಿ ತಂತ್ರಜ್ಞಾನ ಬಳಕೆ ಕೃಷಿ ಪ್ರವಾಸೋದ್ಯಮ ಆರ್ಥಿಕ ಬೆಂಬಲ ಮತ್ತು ಉದ್ಯಮಶೀಲತೆಯಂತಹ ಹಲವು ಸಾಧ್ಯತೆಗಳಿವೆ. ಕೃಷಿ ಬದುಕು ಋಷಿ ಬದುಕಿನಂತೆ ಅದೊಂದು ತಪಸ್ಸು, ಇದು ದೇಶದ ಆರ್ಥಿಕ ಮೂಲದ ಪ್ರಧಾನ ಭಾಗವಾಗಿದ್ದು ಮಣ್ಣು ನೀರು ಮತ್ತು ಜೈವಿಕ ವೈವೇದ್ಯತೆಯನ್ನು ಕಾಪಾಡುವುದು.
ಪ್ರತಿ ಕೃಷಿಕನೂ ಒಬ್ಬ ಸಂತನಂತೆ. ಭೂಮಿ ತಾಯಿಯ ನಗುವಿಗೆ ಕೃಷಿಯೇ ಮೂಲಕ ಕಾರಣ ಎಂದು ಸಪ್ತಗಿರಿ ಫಾರಂ ಅಂಬೋರಿಯ ಪ್ರಗತಿಪರ ಕೃಷಿಕರಾದ ಡಾ. ನಾಗರಾಜ ಶೆಟ್ಟಿ ಹೇಳಿದರು.
ಅವರು ಮೂಡುಮಾರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕೃಷಿ ಬದುಕಿನ ಸಾಧ್ಯತೆಗಳು ಕುರಿತಾದ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಹೇಳಿದರು
ಎಕ್ಸಲೆಂಟ್ ಮೂಡುಬಿದಿರೆಯ ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಪುಷ್ಪರಾಜ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ಡೈಸಿ. ಎಸ್ ಪಿಂಟೋ,ಸುಗಂಧಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸೌಮ್ಯ , ಶಿಬಿರಾಧಿಕಾರಿ ತೇಜಸ್ವಿ ಭಟ್ , ಸಹ ಶಿಬಿರಾಧಿಕಾರಿಗಳಾದ ಪ್ರಶಾಂತ ಶೆಟ್ಟಿ , ಡಾ. ವಾದಿರಾಜ ಕಲ್ಲೂರಾಯ, ಸಂಧ್ಯಾ, ದಿವ್ಯ ಲಕ್ಷ್ಮಿ ರೈ, ಪ್ರದೀಪ ಅಶೋಕ , ಭಾಸ್ಕರ ನೆಲ್ಯಾಡಿ , ವಿಕ್ರಮ ನಾಯಕ್, ಯಶಸ್ವಿನಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಸುಜಲ್ ಶೆಟ್ಟಿ ನಿರೂಪಿಸಿ ಗುರುರಾಜ್ ವಂದಿಸಿದರು.