ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಸಂಸ್ಥೆಯ 80ನೇ ವಾರ್ಷಿಕೋತ್ಸವ

ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಸಂಸ್ಥೆಯ 80ನೇ ವಾರ್ಷಿಕೋತ್ಸವ


ಮಂಗಳೂರು: ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಸಂಸ್ಥೆಯ 80ನೇ ವಾರ್ಷಿಕೋತ್ಸವ ಆಚರಣೆಯ ಸಮಾರಂಭ ಇಂದು ‘ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಮಣ್ಣಗುಡ್ಡದಲ್ಲಿ’ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ಹಿಂದಿ ಭಾಷೆ ಇಂದು ಅವಶ್ಯಕ ವ್ಯವಹಾರಿಕ ಭಾಷೆ ಆಗಿದ್ದು, ಸುಮಾರು 80 ವರ್ಷಗಳ ಹಿಂದೆ ಮಂಗಳೂರಿನ ಹಿಂದಿ ಪ್ರಚಾರ ಸಮಿತಿ  ಆರಂಭಗೊಂಡಿದ್ದು, ಸಮಿತಿಯಲ್ಲಿ ಇದ್ದ ಹಲವು ವ್ಯಕ್ತಿಗಳು ನಗರದಲ್ಲಿ ಹಿಂದಿ ಭಾಷೆಯನ್ನು ಬೆಳೆಸಲು ವಿವಿಧ ರೀತಿಯಲ್ಲಿ ಶ್ರಮಿಸಿದ್ದಾರೆ ಎಂದು ನೆನಪಿಸಿಕೊಂಡರು. ಜನರು ಇಂದು ಟಿವಿ ಮಾಧ್ಯಮದ ಮೂಲಕ ಸಹ ಹಿಂದಿ ಭಾಷೆಯನ್ನು ಕಲಿತುಕೊಳ್ಳುವ ಮೂಲಕ ಮನೆ ಮನೆಯಲ್ಲಿ ಹಿಂದಿ ಭಾಷೆಯನ್ನು ಜನಜನಿತವಾಗಿಸಿಕೊಂಡಿದ್ದಾರೆ. ಮುಂದೆ ಹಿಂದಿ ಪ್ರಚಾರ ಸಮಿತಿಯ ನೂತನ ಕಟ್ಟಡ ನಿರ್ಮಾಣ ಕೆಲಸ ಕಾರ್ಯಗಳಿಗೆ ತನ್ನಿಂದಾಗುವ ಸಂಪೂರ್ಣ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.


ಇನ್ನೋರ್ವ ಅತಿಥಿ ಮಂಗಳೂರಿನ ಎಂಆರ್‌ಪಿಎಲ್‌ನ ಸಹಾಯಕ ಕಾರ್ಯನಿರ್ವಾಹಕ (ಅಧಿಕೃತ ಭಾಷೆ) ಡಾ. ಲಲಿತ್ ರಾಜ್ ಪುರೋಹಿತ್ ಮಾತನಾಡಿ, ಹಿಂದಿ ರಾಷ್ಟ್ರ ಭಾಷೆ ಅಲ್ಲದೆ ಒಂದು ಸರಳ ಭಾಷೆ ಕೂಡ ಆಗಿ, ತುಂಬಾ ವೈವಿಧ್ಯತೆ ಯನ್ನು ಹೊಂದಿದೆ ಎಂದರು.

ಮಾಜಿ ಪರಿಷತ್ ಸದಸ್ಯ ಕ್ಯಾ. ಗಣೇಶ ಕಾರ್ಣಿಕ ಮಾತನಾಡಿ, ಒಂದು ಕಾಲದಲ್ಲಿ ಮಂಗಳೂರಿನ ಹಿಂದಿ ಪ್ರಚಾರ ಸಮಿತಿ ಹಲವಾರು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ನಡೆಸುವ ಮೂಲಕ ಮಂಗಳೂರಿನ ಜನರನ್ನು ಒಗ್ಗೂಡಿಸಿದ ವೇದಿಕೆ ಅಂದರೆ ತಪ್ಪಾಗಲಾರದು. ಮಂಗಳೂರಿನ ಭವಿಷ್ಯದ ಭಾಗವಾಗಿ, ಸಾಂಸ್ಕೃತಿಕವಾಗಿ ಸಹ ಹಿಂದಿ ಭಾಷೆ, ಬೆಳೆಸುವ ನಿಟ್ಟಿನಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಬೇಕಿದೆ ಆ ನಿಟ್ಟಿನಲ್ಲಿ ಹಿಂದಿ ಪ್ರಚಾರ ಸಮಿತಿಯ ಸುಸಜ್ಜಿತ ಕಟ್ಟಡ ನಿರ್ಮಾಣವಾಗಬೇಕಿದೆ, ಮುಂದಿನ ದಿನಗಳಲ್ಲಿ ಎಲ್ಲರೂ ಈ ಮಹಾನ್ ಕಾರ್ಯಕ್ಕೆ ಕೈ ಜೋಡಿಸಬೇಕಿದೆ ಎಂದು ಹೇಳಿದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಸಂಸ್ಥೆಗೆ ತಮ್ಮಿಂದಾಗುವ ಸಹಾಯ, ಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಮಂಗಳೂರಿನ ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿಯ ಮಾಜಿ ಅಧ್ಯಕ್ಷ ಡಾ. ರಾಮ್ ಮೋಹನ್ ರಾವ್, ಅಧ್ಯಕ್ಷ ಡಾ. ಮುರಳೀಧರ ನಾಯಕ, ಕಾರ್ಯದರ್ಶಿ ಮತ್ತು ಸದಸ್ಯರು, ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ, ಸಂಜೀವ್ ಶೆಟ್ಟಿ ಸಂಸ್ಥೆಯ ಉದ್ಯಮಿ ಸಂಜೀವ್ ಶೆಟ್ಟಿ ಉಪಸ್ಥಿತರಿದ್ದರು.

ನಾಗರತ್ನ ರಾವ್ ಪ್ರಸ್ತಾವನೆ ಮಾಡಿದರು. ಪ್ರೊ. ಸುಮತಿ ಸ್ವಾಗತಿಸಿದರು. ಡಾ. ಪಿ.ವಿ. ಶೋಭಾ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article