ರಾಜ್ಯದಲ್ಲಿ ಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ: ಟಿ.ಎಂ. ಶಹೀದ್ ತೆಕ್ಕಿಲ್
ಅವರು ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ರಾಜ್ಯದಲ್ಲಿ ನೊಂದಾಯಿಸಿಕೊಂಡಂತಹ 18 ರಿಂದ 60 ವರ್ಷದವರಿಗೆಲ್ಲರಿಗೂ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದ ಅವರು ಇಲ್ಲಿಯ ತನಕ ಕಾರ್ಮಿಕ ವೇತನ ಬೋರ್ಡ್‌ಗೆ ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗುತ್ತಿತ್ತು. ಆದರೆ ಈಗ ಮೊದಲ ಬಾರಿಗೆ ರಾಜಕೀಯ ವ್ಯಕ್ತಿಯನ್ನು ಹಾಗೂ ಸಾಮಾಜಿಕ ವಲಯದಲ್ಲಿ ತೊಡಗಿಸಿಕೊಂಡಿದ್ದು, ಅಧ್ಯಕ್ಷರು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಈಗಾಗಲೇ ಕನಿಷ್ಠ ವೇತನವನ್ನು ನಗರ-ಗ್ರಾಮೀಣ ಪ್ರದೇಶದ ಆದಾರದಲ್ಲಿ 14 ರಿಂದ 19 ಸಾವಿರ ರೂ. ವರೆಗೆ ಅನುಮೋದನೆಗೊಂಡಿದ್ದು, ಮುಂದಿನ ದಿನದಲ್ಲಿ ಜನರ ಜೀವನ ವೆಚ್ಚದ ಆದಾರವಾಗಿಟ್ಟುಕೊಂಡು ಕನಿಷ್ಠ ವೇತನವನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
ಕನಿಷ್ಠ ವೇತನ ಸಲಹಾ ಮಂಡಳಿಯು ರಾಜ್ಯದೆಲ್ಲೆಡೆ ಕಾರ್ಮಿಕರನ್ನು ಭೇಟಿ ಮಾಟಿ ಮಾಡಿ ಅವರಿಂದ ಬಂದ ಮನವಿ-ಸಲಹೆ ಪತ್ರಗಳನ್ನು ಸರ್ಕಾರಕ್ಕೆ ಮುಟ್ಟಿಸಲಾಗುವುದು ಎಂದ ಅವರು ಕರಾವಳಿಯಲ್ಲಿ ಬೀಡಿ ಕಾರ್ಮಿಕರು ಹೆಚ್ಚಾಗಿದ್ದು, ಅವರ ಸಮಸ್ಯೆಯನ್ನು ಅದ್ಯಾಯನ ಮಾಡಿ ಪರಿಹರಿಸಲಾಗುವುದು ಎಂದು ಹೇಳಿದರು.
ಅ.10ಕ್ಕೆ ಕಾರ್ಮಿಕ ಸಚಿವರು ಜಿಲ್ಲೆಗೆ:
ಅ.10 ರಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಭೇಟಿ ನೀಡಲಿದ್ದು, ಅವರು ಜಿಲ್ಲೆಯ ಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಿದ್ದಾರೆ ಎಂದು ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರ ಮುಖರಾದ ವಿಶ್ವಾಸ್ ದಾಸ್, ಸದಾನಂದ ಪಾವಂಜೆ, ಮುಸ್ತಾಫ, ಶುಭೋದಯ ಆಳ್ವ, ಜಯಶೀಲ ಅಡ್ಯಾಂತಾಯ, ಲಾರೆನ್ಸ್ ಡಿಸೋಜಾ, ನಿತ್ಯಾಧರ ಶೆಟ್ಟಿ ಉಪಸ್ಥಿತರಿದ್ದರು.