ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇ-ಸಿಗರೇಟು ವಶ: ಮೂವರ ಬಂಧನ
ಬಂಧಿತರನ್ನು ಬಂಟ್ವಾಳದ ಗಣೇಶ್ ಕೋಡಿ ಹೌಸ್‌ನ ನಿವಾಸಿ ಸಂತೋಷ್ (32), ಮಂಗಳೂರಿನ ಕುದ್ರೋಳಿಯ ನಿವಾಸಿ ಇಬ್ರಾಹಿಂ ಇರ್ಷಾದ್ (33), ಶಾಪ್‌ನ ಮಾಲಕ ಶಿವು ದೇಶಕೋಡಿ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಅಕ್ರಮವಾಗಿ ಸಾರ್ವಜನಿಕರಿಗೆ, ಯುವಕರ-ಯುವತಿಯರಿಗೆ ಸರಬರಾಜು ಹಾಗೂ ಮಾರಾಟ ಮಾಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ ಸವರು ಠಾಣಾ ಪಿಎಸ್‌ಐ ಮತ್ತು ಸಿಬ್ಬಂದಿಗಳೊಂದಿಗೆ ಅ.6 ರಂದು ಸಂಜೆ ದಾಳಿ ನಡೆಸಿ, ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ೮೪೭ (ಅಂದಾಜು ಮೌಲ್ಯ 4,43,125 ರೂ.) ವಿವಿಧ ಕಂಪನಿಗಳ ಇ-ಸಿಗರೇಟ್‌ಗಳನ್ನು, ಸಿಗರೇಟ್‌ನ ಪ್ಯಾಕ್‌ನ ಮೇಲೆ ಶೇ.85 ಪ್ರತಿಶತ ಅದರ ಸೇವನೆಯಿಂದ ಆಗುವ ದುಷ್ಪರಿಣಾಮದ ಚಿತ್ರವನ್ನು ಪ್ರದರ್ಶಿಸದೇ ಇರುವ ವಿವಿಧ ಕಂಪನಿಗಳ ಸ್ವದೇಶಿ ಮತ್ತು ವಿದೇಶಿಯ ಒಟ್ಟು 10 Pack (412 box) ಮತ್ತು 86 Pack ಸಿಗರೇಟ್‌ಗಳು (ಅಂದಾಜು ಮೌಲ್ಯ 5,09,120 ರೂ.) ಮತ್ತು ಹುಕ್ಕಾ ಸೇವನೆ ಮಾಡುವ ಬಳಸುವ ವಿವಿಧ ಆಕೃತಿಗಳ 25 (ಅಂದಾಜು ಮೌಲ್ಯ ರೂ.20,500 ರೂ.) ಸಾಧನಗಳನ್ನು ಒಟ್ಟು ಅಂದಾಜು ಮೌಲ್ಯ 9,72,745 ರೂ. ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅವರುಗಳ ಮೇಲೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.