ಇತಿಹಾಸ ತಿಳಿದವರು ಇತಿಹಾಸ ಸೃಷ್ಠಿಸುತ್ತಾರೆ: ಡಾ. ವೈ. ಭರತ್ ಶೆಟ್ಟಿ
ವಾಮಂಜೂರಿನ ಅಮೃತೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಏಳು ದಿನಗಳ ಕಾಲ ನಡೆದ ನಂತೂರಿನ ಡಾ. ಎನ್‌ಎಸ್‌ಎಎಂ ಕಾಲೇಜಿನ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಡಾ. ನವೀನ್ ಶೆಟ್ಟಿ ಕೆ. ಮಾತನಾಡಿ, ಯುವ ಜನತೆ ನಶೆಯ ದಾಸರಾಗುತ್ತಿರುವ ಈ ದಿನಗಳಲ್ಲಿ ಅವುಗಳನ್ನು ತಡೆಗಟ್ಟಲು ಎನ್‌ಎಸ್‌ಎಸ್ ಕಂಕಣ ಬದ್ದವಾಗಿರುವುದು ಶ್ಲಾಘನೀಯ. ಸ್ವಚ್ಛತೆ ಹೊರತು ಪಡಿಸಿದ ಶಿಕ್ಷಣ ಅರ್ಥಹೀನ. ಇದು ಕೇವಲ ಮನೆ ವಠಾರಕ್ಕೆ ಸೀಮಿತವಾಗಿರದೆ ಸಾಮಾಜಿಕ ಸ್ವಚ್ಛತೆ ಕಡೆಗೂ ಯುವಜನತೆ ಬದ್ಧತೆಯನ್ನು ಹೊಂದಿರಬೇಕು. ಇಂತಹ ಉದಾತ್ತ ಗುಣಗಳನ್ನು ಇಂತಹ ಶಿಬಿರಗಳು ಬೆಳೆಸುತ್ತವೆ ಎಂದರು.
ಅಮೃತೇಶ್ವರ ಶಾಲೆಯ ಕೋಶಾಧಿಕಾರಿ ಜಯರಾಮ ಶೆಟ್ಟಿ, ಆಡಳಿತಾಧಿಕಾರಿ ಕೆ.ವಿ. ಶೆಟ್ಟಿ, ಕಿಟೆಲ್ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಠಲ್ ಎ., ಅಶೋಕನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಬಿ. ಶೆಟ್ಟಿ, ಲಯನ್ಸ್ ಜಿಲ್ಲಾ ವಲಯಾಧ್ಯಕ್ಷ ನರೇಶ್ ಕುಮಾರ್ ಶೆಟ್ಟಿ, ಸಂಸ್ಥೆಯ ಉಪಪ್ರಾಂಶುಪಾಲೆ ಅನ್ನಪೂರ್ಣ ನಾಯಕ್, ಎನ್‌ಎಸ್‌ಎಸ್ ಉಪಯೋಜನಾಧಿಕಾರಿ ವಿದ್ಯಾರಾಣಿ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಶ್ರೇಯಾ ಪ್ರಾರ್ಥಿಸಿದರು. ಗೀತಾ ಸ್ವಾಗತಿಸಿ, ಯೋಜನಾಧಿಕಾರಿ ಸಂತೋಷ್ ಎ. ಶೆಟ್ಟಿ ವಂದಿಸಿದರು. ರವಿಶಂಕರ ಹೆಗಡೆ ವಂದಿಸಿದರು.