ಸಿಡಿಲು ಬಡಿದು ಹಾನಿ: ಇಬ್ಬರಿಗೆ ಗಾಯ

ಸಿಡಿಲು ಬಡಿದು ಹಾನಿ: ಇಬ್ಬರಿಗೆ ಗಾಯ

ಮಂಗಳೂರು: ಶನಿವಾರ ರಾತ್ರಿ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಸುರತ್ಕಲ್‌ನ ಮಧ್ಯ ಗ್ರಾಮದ ಮಾಧವ ನಗರದ ಬೇಬಿ ಎಂಬವರ ಮನೆಗೆ ಸಿಡಿಲು ಬಡಿದು ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ವರದಿಯಾಗಿದೆ.

ಗಾಯಗೊಂಡವರನ್ನು ಲಾವಣ್ಯ (19) ಹಾಗೂ ಸೌಜನ್ಯ (16) ಎಂದು ಗುರುತಿಸಲಾಗಿದೆ.

ಈ ವೇಳೆ ಮನೆಯಲ್ಲಿ ಐದು ಮಂದಿ ಸದಸ್ಯರಿದ್ದರು, ಈ ಪೈಕಿ ಲಾವಣ್ಯ ಮತ್ತು ಸೌಜನ್ಯ ಅವರಿಗೆ ಸಣ್ಣಪುಟ್ಟಗಾಯಗಳಾಗಿದ್ದು ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ಮನೆಯ ಗೋಡೆ, ನೆಲಕ್ಕೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article