ರೌಡಿಶೀಟರ್ ಮದನ್ ಬುಗುಡಿ ವಿಚಾರಣೆಗೆ ಹಾಜರು
ಮಂಗಳೂರು: ಮಾನವಹಕ್ಕು ಅಧಿಕಾರಿ ಎಂದು ರೌಡಿಶೀಟರ್‌ನನ್ನು ತೋರಿಸಿ ಗಿರೀಶ್ ಮಟ್ಟಣ್ಣವರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ರೌಡಿಶೀಟರ್ ಮದನ್ ಬುಗುಡಿ ವಿಚಾರಣೆಗೆ ಹಾಜರಾಗಿದ್ದಾನೆ.
ಬೆಳ್ತಂಗಡಿ ಪೊಲೀಸ್ ಠಾಣೆಗೆ ಮದನ್ ಬುಗುಡಿ ವಕೀಲರ ಜೊತೆ ಆಗಮಿಸಿದ್ದಾನೆ. ಈ ಸಂಬಂಧ ಗಿರೀಶ್ ಮಟ್ಟಣ್ಣವರ್, ಮದನ್ ಬುಗುಡಿ, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ಆಗಸ್ಟ್ 30ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮಾಜದ ಶಾಂತಿ ಸೌಹಾರ್ದತೆಯನ್ನು ನಾಶಪಡಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ ಆರೋಪದಲ್ಲಿ ಬೆಳ್ತಂಗಡಿ ನಿವಾಸಿ ಪ್ರವೀಣ ಕೆ.ಆರ್. ಎಂಬವರು ನೀಡಿದ ದೂರಿನ ಆಧಾರದಲ್ಲಿ ಕ್ರ.ಸಂ. BNS ಅಡಿಯಲ್ಲಿ 204, 319(2), 353(2) ಜೊತೆಗೆ 3(5) ಪ್ರಕರಣ ದಾಖಲಾಗಿದೆ.
ಮದನ್ ಬುಗುಡಿ ಎಂಬ ರೌಡಿ ಶೀಟರ್‌ನನ್ನು ಮಾಧ್ಯಮದ ಮುಂದೆ ಮಾನವಹಕ್ಕು ಅಧಿಕಾರಿ ಎಂದು ಮಟ್ಟಣ್ಣವರ್ ಸುಳ್ಳು ಮಾಹಿತಿ ನೀಡಿದ್ದು, ಸಮಾಜವನ್ನು ವಂಚಿಸಿ ಮಾನವಹಕ್ಕು ಆಯೋಗದ ಪ್ರಾಮಾಣಿಕತೆಗೆ ಕಳಂಕ ತರಲು ಯತ್ನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸಾರ್ವಜನಿಕರು ದಂಗೆ ಏಳುವಂತೆ ಪ್ರಚೋದನೆ ನೀಡಿದ್ದು, ಧರ್ಮಸ್ಥಳದ ಬಗ್ಗೆ ಧಾರ್ಮಿಕ ಭಾವನೆಯನ್ನು ಕೆಡಿಸುವ ಉದ್ದೇಶದ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.