ದೇಶಭಕ್ತ ಸಂಘಟನೆ ಆರ್‌ಎಸ್‌ಎಸ್ ಮೇಲೆ ಕಾಂಗ್ರೆಸ್ ಕಾನೂನು ದುರ್ಭಳಕೆಯ ಷಡ್ಯಂತ್ರ, ಬಿಜೆಪಿ ಆಕ್ರೋಶ: ಸತೀಶ್ ಕುಂಪಲ
ಹಿಂದು ಸಮಾಜದ ಸಂಘಟನೆಯೊಂದಿಗೆ ದೇಶಸೇವೆಗೈಯುವ ಧ್ಯೇಯದಿಂದ ರಾಷ್ಟ್ರಭಕ್ತ ವ್ಯಕ್ತಿ ನಿರ್ಮಾಣ ಕಾರ್ಯ ನಡೆಸುತ್ತಿರುವ ಸಂಘವು ದೇಶದ ಸಮಗ್ರತೆಗೆ, ಸುರಕ್ಷತೆಗೆ ದಕ್ಕೆ ಬಂದ ಸಂಧರ್ಭದಲ್ಲಿ ದೇಶದ ಹಿತಕ್ಕಾಗಿ ಕಾರ್ಯ ನಿರ್ವಹಿಸಿದೆ. ಇಂತಹ ಸಂಘಟನೆಯ ಮೇಲೆ ಪ್ರಿಯಾಂಕ ಖರ್ಗೆಯಂತಹ ಸಂಕುಚಿತ ಮನಸ್ಥಿತಿಯ ಸಚಿವರು ಆರೋಪ ವ್ಯಕ್ತಪಡಿಸುವುದು ಅವರ ತಾಳಕ್ಕೆ ತಕ್ಕಂತೆ ಕುಣಿಯಲು ಹೊರಟಿರುವ ಸಿದ್ದರಾಮಯ್ಯ ತನ್ನ ಬುದ್ದಿಯನ್ನೇ ಕಳೆದು ಕೊಂಡಿರುವಂತೆ ವರ್ತಿಸುತ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎನ್ನುವವರ ಮೇಲೆ ಮೃದು ದೋರಣೆ ಇರುವ ಕಾಂಗ್ರೆಸ್, ದೇಶಭಕ್ತರ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ.
ಪ್ರಾಕೃತಿಕ ವಿಕೋಪ ಬಂದ ಸಂಧರ್ಭದಲ್ಲಿ ಸಂಘದ ಸ್ವಯಂ ಸೇವಕರು ಜಾತಿ, ಭಾಷೆ, ಪ್ರದೇಶಗಳ ಗಡಿ ಮೀರಿ ರಕ್ಷಣೆಗೆ ದಾವಿಸಿದ್ದಾರೆ. ಸಂಘದ ಪಥ ಸಂಚಲನಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಲು ಹೊರಟಿರುವ ಕಾಂಗ್ರೆಸ್ ಸರ್ಕಾರ, ಸಂಘವು ಭಾರತ, ಚೀನಾ ಯುದ್ಧ ಸಮಯದಲ್ಲಿ ದೇಶದ ಸೈನಿಕರಿಗೆ ಬೆಂಗವಲಾಗಿ ಕೆಲಸ ಮಾಡಿರುವ ಕಾರ್ಯಕ್ಕೆ ನೆಹರೂ ಅವರು ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಥ ಸಂಚಲನಕ್ಕೆ ಅವಕಾಶ ನೀಡಿರುವುದನ್ನು ಮರೆತು ಹೋಗಿರುವುದು ಅಲ್ಪಸಂಖ್ಯಾತರ ಓಲೈಕೆಗಾಗಿ ಆಗಿದೆ.
ಸಂಘದ ನೂರು ವರ್ಷಗಳ ಕಾರ್ಯಕ್ರಮಗಳಿಂದ ದೇಶಭಕ್ತ ನಾಗರಿಕರು ಖುಷಿ ಪಡುತ್ತಿದ್ದರೆ, ರಾಷ್ಟ್ರದ್ರೋಹಿಗಳು ಭಯಬೀತರಾಗಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ತಮ್ಮ ಅಧಿಕಾರ ದುರ್ಭಳಕೆ ಮಾಡಿ ಆರ್‌ಎಸ್‌ಎಸ್ ಅನ್ನು ನಿಯಂತ್ರಿಸಲು ಹೊರಟಿರುವುದು ತಿರುಕನ ಕನಸು, ಸಿದ್ದರಾಮಯ್ಯ ಈ ದುಸ್ಸಾಹಸವನ್ನು ನಿಲ್ಲಿಸಬೇಕು. ಇಂತಹ ಹಲವಾರು ಸವಾಲುಗಳನ್ನು ಎದುರಿಸಿ ಬಲಾಡ್ಯಗೊಂಡಿರುವ ಸಂಘಟನೆಯಾಗಿದೆ ಎಂದು ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.