ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಭರತ್ ಶೆಟ್ಟಿ ಗುದ್ದಲಿ ಪೂಜೆ

ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಭರತ್ ಶೆಟ್ಟಿ ಗುದ್ದಲಿ ಪೂಜೆ


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಿಂದ ಸುರತ್ಕಲ್ ಪೂರ್ವ 2ನೇ ವಾರ್ಡಿನ ವೆಂಕಟರಮಣ ಕಾಲನಿ ಬಳಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ 8 ಲಕ್ಷ ರೂಪಾಯಿ, ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿ ಮಳೆ ನೀರಿನ ಚರಂಡಿ ಕಾಮಗಾರಿಗೆ 5 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಸದಸ್ಯ ಡಾ. ವೈ ಭರತ್ ಶೆಟ್ಟಿಯವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು  ಪಾಲಿಕೆ ವಾರ್ಡ್ ನಂಬ್ರ 2ರಲ್ಲಿ ಬಹಳಷ್ಟು ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ ನಡೆದಿದೆ. ನಿಕಟಪೂರ್ವ ಪಾಲಿಕೆಯ ಸದಸ್ಯರಾದ  ಶ್ವೇತಾ ಪೂಜಾರಿ ಅವರ ಅವಧಿಯಲ್ಲಿ  ರಸ್ತೆ ಕಾಂಕ್ರಟೀಕರಣ, ತಡೆಗೋಡೆ ನಿರ್ಮಾಣ, ಮುಂಚೂರಿನಲ್ಲಿ  ಬರುತ್ತಿದ್ದ ನೆರೆಗೆ ಶಾಶ್ವತ ಪರಿಹಾರ  ಸೇರಿದಂತೆ  ಉತ್ತಮ ಕೆಲಸ ಕಾರ್ಯಗಳನ್ನು ಮಾಡಲಾಗಿದೆ ಎಂದರು.
ಪಾಲಿಕೆ ಸದಸ್ಯೆ ಶ್ವೇತಾ ಪೂಜಾರಿ ಅವರು  ಅನುದಾನ ಒದಗಿಸಿಕೊಟ್ಟ  ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ನಿಕಟಪೂರ್ವ ಪಾಲಿಕೆ ಸದಸ್ಯರಾದ ಸರಿತಾ ಶಶಿಧರ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್  ಅಧ್ಯಕ್ಷರಾದ ಅಶೋಕ್ ಶೆಟ್ಟಿ ತಡಂಬೈಲ್, ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾದ  ದಿನಕರ್ ಇಡ್ಯಾ, ಬಿಜೆಪಿ ಪ್ರಮುಖರಾದ ಪುಷ್ಪರಾಜ್ ಮುಕ್ಕ, ರಾಘವೇಂದ್ರ ಶೆಣೈ, ಸುರೇಂದ್ರ, ಸುಧಾಕರ್, ಸಂತೋಷ್ ಕುಮಾರ್, ಸಜಿತ್  ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article