ಆಶ್ಲೇಷ ನಕ್ಷತ್ರ ಹಿನ್ನಲೆ ಕುಕ್ಕೆ ಕ್ಷೇತ್ರದಲ್ಲಿ ಅಧಿಕ ಭಕ್ತ ಸಂದಣಿ
Friday, October 17, 2025
ಸುಬ್ರಹ್ಮಣ್ಯ: ಆಶ್ಲೇಷ ನಕ್ಷತ್ರ ದಿನದ ಹಿನ್ನಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅಧಿಕ ಭಕ್ತರು ಆಗಮಿಸಿ, ಶ್ರೀದೇವರ ದರ್ಶನ ಪಡೆದು ಸೇವೆಗಳನ್ನು ನೆರವೇರಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವರ ನಕ್ಷತ್ರವಾದ ಆಶ್ಲೇಷಕ್ಕೆ ನಕ್ಷತ್ರ ದಿನ ಮಹತ್ವದ ದಿನವಾಗಿದ್ದು, ತಿಂಗಳಲ್ಲಿ ಬರುವ ಶುದ್ಧ ಷಷ್ಠಿ ಹಾಗೂ ಆಶ್ಲೇಷ ನಕ್ಷತ್ರ ಎರಡು ದಿನಗಳು ಬಹಳ ಪ್ರಾಮುಖ್ಯವಾದದ್ದು. ಗುರುವಾರ ಆಶ್ಲೇಷ ನಕ್ಷತ್ರ ದಿನದಂದು ಅಧಿಕ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ದೇಗುಲದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಭಕ್ತರ ದಟ್ಟಣೆ ತುಂಬಿತ್ತು. ದೇವಸ್ಥಾನದ ಅಧಿಕಾರಿಗಳು ಸಿಬ್ಬಂದಿಗಳು ಭಕ್ತರಿಗೆ ಪೂರಕ ವ್ಯವಸ್ಥೆಯನ್ನು ಕಲ್ಪಿಸಿದರು. ಮಧ್ಯಾಹ್ನ 11.30 ರಿಂದಲೇ ಭೋಜನ ಪ್ರಸಾದ ವಿತರಣೆ ಆರಂಬಿಸಲಾಗಿತ್ತು. ಪೇಟೆಯಲ್ಲಿ ವಾಹನ ದಟ್ಟಣೆಯೂ ಅಧಿಕವಾಗಿತ್ತು.