ಆತಂಕ ಸೃಷ್ಟಿಯಾಗದಂತೆ ಮುಂಜಾಗೃತೆ ವಹಿಸಲು ಸೂಚನೆ
Saturday, October 18, 2025
ಮಂಗಳೂರು: ದೀಪಾವಳಿ ಹಬ್ಬದ ದಿನಗಳಲ್ಲಿ ಸಾರ್ವಜನಿಕರು ಸಿಡಿಸುವ ಸಿಡಿಮದ್ದುಗಳ (ಪಟಾಕಿ) ಶಬ್ದದಿಂದ ಸಾಕು ಪ್ರಾಣಿ/ ಜಾನುವಾರುಗಳಲ್ಲಿ ಭೀತಿ ಸೃಷ್ಟಿಯಾಗಿ ಜಾನುವಾರುಗಳು ಹಲವು ದಿನಗಳ ಕಾಲ ಆಹಾರವನ್ನು ತ್ಯಜಿಸುತ್ತವೆ ಹಾಗೂ ಮೂಲ ಸ್ಥಾನದಿಂದ ಪಲಾಯನ ಮಾಡುವ ಸಂಭವವಿರುತ್ತದೆ.
ಅನಾರೋಗ್ಯ ಪೀಡಿತ ಜಾನುವಾರುಗಳಿಗೆ ವ್ಯತಿರಿಕ್ತ ಪರಿಣಾಮಗಳಾಗುತ್ತದೆ. ಆದ್ದರಿಂದ ಸಾರ್ವಜನಿಕರು ಪ್ರಾಣಿಗಳನ್ನು ಪಟಾಕಿಗಳ ಕರ್ಕಶ ಶಬ್ದಗಳಿಂದ ಮುಕ್ತಗೊಳಿಸಲು ಅಗತ್ಯ ಮುಂಜಾಗೃತಾ ಕ್ರಮವಹಿಸುವಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕರು (ಆಡಳಿತ) ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.