ಸೋಲಾರ್ ಬೇಲಿ ಮುರಿದ ಕಾಡಾನೆ
Saturday, October 18, 2025
ಉಜಿರೆ: ಮಿತ್ತಬಾಗಿಲು ಗ್ರಾಮದ ಮಲ್ಲಜೋಡಿ ಎಂಬಲ್ಲಿ ಆನಂದನಾರಾಯಣ ಎಂಬವರ ತೋಟಕ್ಕೆ ಅಳವಡಿಸಿದ್ದ ಸೋಲಾರ್ ಬೇಲಿಯ ಕಂಬವನ್ನು ಕಾಡಾನೆ ಮುರಿದು ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ತೋಟದೊಳಗೆ ಹಾಕಿದ ಬೇಲಿ ಮೂಲಕ ಪ್ರವೇಶಿಸಲು ಪ್ರಯತ್ನಿಸಿದ ಕಾಡಾನೆ ಕಂಬವನ್ನು ಮುರಿದಿದ್ದು ಈ ವೇಳೆ ಸೋಲಾರ್ ಬೇಲಿಯ ಶಾಕ್ ಹೊಡೆದಿದ್ದು ತೋಟಕ್ಕೆ ಪ್ರವೇಶಿಸದೆ ವಾಪಸಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಇಲ್ಲಿ ಕಾಡಾನೆ ಗೇಟ ಅನ್ನು ಮುರಿದು ಹಾಕಿ ತೋಟ ಪ್ರವೇಶಿಸಿ ಕೃಷಿ ಹಾನಿ ಉಂಟು ಮಾಡಿತ್ತು.