ಬೀದಿಬದಿ ವ್ಯಾಪಾರ ನಿಷೇಧ
Friday, October 24, 2025
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕೆ.ಪಿ.ಟಿ.ಯಿಂದ ವಿಮಾನ ನಿಲ್ದಾಣ ತನಕ ಬೀದಿಬದಿ ವ್ಯಾಪಾರಮುಕ್ತ ವಲಯ ಎಂದು ಈಗಾಗಲೇ ಘೋಷಿಸಲಾಗಿದೆ. ಆದುದರಿಂದ ಕೆ.ಪಿ.ಟಿಯಿಂದ ವಿಮಾನ ನಿಲ್ದಾಣ ತನಕದ ರಸ್ತೆಯ ಎರಡೂ ಬದಿಯ ಫುಟ್ಪಾತ್ಗಳಲ್ಲಿ ಯಾವುದೇ ಬೀದಿಬದಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಯಾರಾದರೂ ರಸ್ತೆಯ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರ ಮಾಡುವುದು ಕಂಡುಬಂದರೆ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದೆಂದು ಮಹಾನಗರಪಾಲಿಕೆ ಕದ್ರಿ ವಲಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.