ಕೆಲವು ಕಾಂಗ್ರೆಸ್ ನಾಯಕರು ಬಾಲಿಶ ಹೇಳಿಕೆ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ದುರಂತ: ಶಾಸಕ ಕಾಮತ್

ಕೆಲವು ಕಾಂಗ್ರೆಸ್ ನಾಯಕರು ಬಾಲಿಶ ಹೇಳಿಕೆ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ದುರಂತ: ಶಾಸಕ ಕಾಮತ್


ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಘಟಕಗಳ ಸಂಖ್ಯೆಗಳು ಕಡಿಮೆಯಿರುವ ಕಾರಣ ತುರ್ತು ಸಂದರ್ಭದಲ್ಲಿ ರೋಗಿಗಳು ಪರದಾಡುವಂತಾಗಿದೆ. ದಯವಿಟ್ಟು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕ್ಷೇತ್ರದ ಜವಾಬ್ದಾರಿಯುತ ಶಾಸಕನಾಗಿ ಆರೋಗ್ಯ ಸಚಿವರಿಗೆ ಪತ್ರ ಬರೆದು ಪತ್ರಿಕಾ ಹೇಳಿಕೆ ನೀಡಿದ್ದಕ್ಕೆ ಕೆಲವು ಕಾಂಗ್ರೆಸ್ ನಾಯಕರು ಬಾಲಿಶ ಹೇಳಿಕೆ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ದುರಂತವೆಂದು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ವೆನ್ಲಾಕ್ ಆಸ್ಪತ್ರೆಗೆ ನಮ್ಮ ಜಿಲ್ಲೆ ಮಾತ್ರವಲ್ಲದೇ, ಸುತ್ತಮುತ್ತಲಿನ 9-10 ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಹಾಗೆ ಬಂದ ಅನೇಕರು ಒಂದು ಐಸಿಯು ಬೆಡ್ ದೊರಕಿಸಿಕೊಡಿ ಎಂದು ಮನವಿ ಮಾಡುತ್ತಾರೆ. ಆ ವೇಳೆ ಆಸ್ಪತ್ರೆಯ ಸಂಬಂಧಪಟ್ಟವರಿಗೆ ಕರೆ ಮಾಡಿದಾಗ ಬಹುತೇಕ ಬಾರಿ ಬೆಡ್ ಖಾಲಿ ಇಲ್ಲ ಎಂಬ ಉತ್ತರವೇ ಬರುತ್ತದೆ. ಇದು ಹೆಚ್ಚಿನ ಶಾಸಕರ ಅನುಭವಕ್ಕೂ ಬಂದಿದೆ. ಆಸ್ಪತ್ರೆಯವರ ಈ ಅಸಹಾಯಕತೆಯನ್ನು ನೋಡಿಯೇ ಇಲ್ಲಿನ ಐಸಿಯು ಘಟಕಗಳ ಸಂಖ್ಯೆಯನ್ನು ಕನಿಷ್ಠ 200 ಕ್ಕೆ ಹೆಚ್ಚಿಸಿ ಎಂದು ನಾನು ಸರ್ಕಾರಕ್ಕೆ ಆಗ್ರಹಿಸಿದ್ದು. ಇಂತಹ ಸೂಕ್ಷ್ಮ ವಿಚಾರದಲ್ಲೂ ರಾಜಕೀಯವನ್ನು ಹುಡುಕುವ ಕೆಲವು ಕಾಂಗ್ರೆಸ್ ನಾಯಕರಿಗೆ ಬಡ ರೋಗಿಗಳ ಸಮಸ್ಯೆ ಅರ್ಥವಾಗುವುದಿಲ್ಲ ಎಂದರು.

2018 ರಲ್ಲಿ ನಾನು ಶಾಸಕನಾದಾಗ ಕೇವಲ 16 ಐಸಿಯು ಇದ್ದವು. ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಎಸ್ ಅಂಗಾರ ರವರ ಸಹಕಾರ ಹಾಗೂ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲು ಅವರು ತಮ್ಮ ಒಂದು ವರ್ಷದ ಸಂಸದರ ನಿಧಿಯನ್ನು ಸಂಪೂರ್ಣವಾಗಿ ವೆನ್ಲಾಕ್ ಆಸ್ಪತ್ರೆಗೆ ನೀಡಿದ್ದರಿಂದ ಕೊರೋನ ಸಾಂಕ್ರಾಮಿಕದ ಸಂದರ್ಭದಲ್ಲಿ 116 ಕ್ಕೂ ಹೆಚ್ಚು ಐಸಿಯು ಗಳನ್ನು ನಿರ್ಮಿಸಲಾಗಿತ್ತು. ಜೊತೆಗೆ ಈ ಹಿಂದೆ ಕೇವಲ 50 ರಷ್ಟಿದ್ದ ಆಕ್ಸಿಜನ್ ಬೆಡ್ ಗಳನ್ನು 250 ಕ್ಕೂ ಏರಿಸಲಾಗಿತ್ತು. ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು ಈ ನಿಟ್ಟಿನಲ್ಲಿ ಏನು ಕೊಡುಗೆ ನೀಡಿದ್ದಾರೆ? ಒಂದಾದರೂ ಹೆಚ್ಚುವರಿ ಐಸಿಯು ನಿರ್ಮಿಸಿದ್ದಾರಾ? ಎಂಬುದನ್ನು ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯರು ಬಹಿರಂಗ ಪಡಿಸಲಿ ನೋಡೋಣ ಎಂದು ಶಾಸಕರು ಸವಾಲೆಸೆದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article