ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವಧರ್ಮ ಭಜನಾ ಕಮ್ಮಟ ಉದ್ಘಾಟನೆ
Saturday, October 25, 2025
ಮೂಡುಬಿದಿರೆ: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಸರ್ವಧರ್ಮ ಭಜನಾ ಕಮ್ಮಟ ಕಾರ್ಯಕ್ರಮವನ್ನು ಶನಿವಾರದಂದು ಉದ್ಘಾಟಿಸಲಾಯಿತು.
ಕಮ್ಮಟವನ್ನು ನಮ್ಮ ಶಾಲಾ ಸಂಚಾಲಕರಾದ ಕೆ.ಹೇಮರಾಜ್ ಅವರು ದೀಪಾ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಭಜನೆಯು ಮಕ್ಕಳಲ್ಲಿ ಉಚ್ಛಾರಣಾ ದೋಷವನ್ನು ಸರಿಪಡಿಸುವಲ್ಲಿ ಸಹಕಾರಿಯಾಗಿದ್ದು , ಈ ಹಿಂದೆಯೂ ನಮ್ಮ ಶಾಲೆಯಲ್ಲಿ ಭಜನೆ ನಡೆಯುತ್ತಿದ್ದುದನ್ನು ಸ್ಮರಿಸಿದ ಅವರು ಉತ್ತಮ ಭಜನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಶಶಿಕಾಂತ್ ವೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಭಜನೆಯು ಸರ್ವರನ್ನೂ ಒಗ್ಗೂಡಿಸುತ್ತದೆ ಎಂದು ತಿಳಿಸಿದರು.
ನಂತರ ವಿದ್ಯಾರ್ಥಿಗಳಿಂದ ಕುಣಿತ ಭಜನೆಯು ನೆರವೇರಿತು. ಶಾಲಾ ಎಲ್ಲಾ ವಿದ್ಯಾರ್ಥಿಗಳು ಸರ್ವಧರ್ಮದ ಭಜನೆಯಲ್ಲಿ ಭಾಗವಹಿಸಿದರು.
ಹಿರಿಯ ಶಿಕ್ಷಕಿ ಮಂಜುಳಾ ಜೈನ್ ಅವರು ಕಾಯ೯ಕ್ರಮ ನಿರೂಪಿಸಿ ವಂದಿಸಿದರು.
