ಮಾಜಿ ಸಚಿವ ರಮಾನಾಥ ರೈ ಅವರ ಅರ್‌ಎಸ್‌ಎಸ್ ಕುರಿತು ಹೇಳಿಕೆ ವಿರುದ್ಧ ತೀವ್ರ ಆಕ್ರೋಶ: ಅರುಣ್ ಜಿ. ಶೇಟ್

ಮಾಜಿ ಸಚಿವ ರಮಾನಾಥ ರೈ ಅವರ ಅರ್‌ಎಸ್‌ಎಸ್ ಕುರಿತು ಹೇಳಿಕೆ ವಿರುದ್ಧ ತೀವ್ರ ಆಕ್ರೋಶ: ಅರುಣ್ ಜಿ. ಶೇಟ್

ಮಂಗಳೂರು: ಮಾಜಿ ಸಚಿವ ಬಿ. ರಮಾನಾಥ ರೈ ಅವರು ಆರ್‌ಎಸ್‌ಎಸ್ ಕುರಿತು ನೀಡಿರುವ ಹೇಳಿಕೆಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರ, ಅಜ್ಞಾನಪೂರ್ಣ ಮತ್ತು ರಾಜಕೀಯವಾಗಿ ದುರುದ್ದೇಶಪೂರಿತವಾಗಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ಪ್ರಕಟಣೆ ತಿಳಿಸಿದೆ.

ಆರ್‌ಎಸ್‌ಎಸ್ ದೇಶದ ಸಾಂಸ್ಕೃತಿಕ ಏಕತೆಯ, ಸೇವಾ ಚಟುವಟಿಕೆಗಳ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾಗಿದ್ದು, ಇಂತಹ ಸಂಸ್ಥೆಯನ್ನು ‘ವಿಷಬೀಜ ಬಿತ್ತುವ ಸಂಘಟನೆ’ ಎಂದು ಹೇಳಿರುವುದು ರಾಷ್ಟ್ರಪ್ರೇಮಿಗಳ ಭಾವನೆಗಳನ್ನು ಘಾಸಿ ಮಾಡಿದೆ. ರಾಷ್ಟಭಕ್ತ ಸಂಘಟನೆ ಎಂದು ಜನರು ಮೊದಲು ಗುರುತಿಸುವುದು ಸಂಘವನ್ನೇ ಹೊರತು  ಕಾಂಗ್ರೆಸ್ ಅನ್ನು ಅಲ್ಲ. ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟಾಚಾರ ಹಾಗೂ ಸರಕಾರದ ಅಸ್ಪಷ್ಟ ನೀತಿಗಳಿಂದ ಸಂತ್ರಸ್ತರಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಅವ್ಯಾಹತ ಆಗುತ್ತಿವೆ. 

ರಸ್ತೆಯಲ್ಲಿರುವ ಗುಂಡಿಗಳು, ಅಭಿವೃದ್ಧಿ ಮಾಡೋದನ್ನು ಬಿಡಿ. ಈಗಾಗಲೇ ಇರುವ ವಾಸ್ತವ ಸ್ಥಿತಿಯನ್ನೇ ಮುಂದುವರಿಸಲೂ ಆಗದ ತಮ್ಮ ರಾಜ್ಯ ಕಾಂಗ್ರೆಸ್ ಸರಕಾರದ ದುರವಸ್ಥೆಯನ್ನು ಮರೆಮಾಚಲು ಆರ್‌ಎಸ್‌ಎಸ್ ಮೇಲೆ ನಿರ್ಬಂಧ ಹೇರುತ್ತೇವೆ ಅನ್ನೋ ನಾಟಕವನ್ನು ಸಚಿವ ಪ್ರಿಯಾಂಕ್ ಖರ್ಗೆಯವರು ಶುರು ಹಚ್ಚಿಕೊಂಡಿರುವುದು  ಹಿರಿಯರಾದ ರಮಾನಾಥ ರೈ ಅವರು ಸಮರ್ಥನೆ ನೀಡುವುದು ನೋಡಿದರೆ ನಿಮ್ಮ ಬಗ್ಗೆ ದಕ್ಷಿಣ ಕನ್ನಡ ಜನತೆಗೆ ಅಯ್ಯೋ ಪಾಪ ಅಂತ ಅನ್ನಿಸಿರುವುದಂತೂ ನಿಜ.

ಸಂಘದಲ್ಲಿ ಕೆಲಸ ಮಾಡುವ ಸ್ವಯಂಸೇವಕರು ನಿಸ್ವಾರ್ಥವಾಗಿ ಹಲವಾರು ವರ್ಷಗಳಿಂದ ತನ್ನ ಮಾತೃಭೂಮಿಯ ಸೇವೆ ತಾಯಿಯ ಸೇವೆ ಎಂಬ ಭಾವದಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಅಧಿಕಾರದ ದುರಾಸೆಗೆ ಬಿದ್ದ ನೀವುಗಳು ಸಂಘವನ್ನು ಆವಹೇಳನ ಮಾಡುವಷ್ಟು ಬೆಳೆಯಬೇಕಾದರೆ ಅದಕ್ಕೆ ತಾವುಗಳು ಮಾತೃಭೂಮಿಗಾಗಿ ಹಲಾವಾರು ತ್ಯಾಗವನ್ನು ಮಾಡಬೇಕಾಗುತ್ತದೆ.

ಸರದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಉಲ್ಲೇಖಿಸುತ್ತಾ ಆರ್‌ಎಸ್‌ಎಸ್ ನಿಷೇದಿಸಬೇಕೆಂದು ಹೇಳುವುದು ಇತಿಹಾಸದ ವಾಸ್ತವತೆಯ ವಿರುದ್ಧದ ವಕ್ರದೃಷ್ಟಿ. ಪಟೇಲ್ ಅವರು ಸ್ವತಃ ಸಂಘದ ನಿಷ್ಠೆ ಮತ್ತು ದೇಶಭಕ್ತಿಯನ್ನು ಮೆಚ್ಚಿ ನಿಷೇಧವನ್ನು ಕೈಬಿಟ್ಟಿದ್ದರು ಎಂಬುದು ದಾಖಲೆಗಳ ಸತ್ಯ. ಮಹಾತ್ಮಾ ಗಾಂಧಿಜಿಯವರು ಹಾಗೇನೆ ಅಂಬೇಡ್ಕರ್ ಅವರು ಅಂದು ಸಂಘಕ್ಕೆ ಭೇಟಿ ನೀಡಿ ಗೌರವದ ಮಾತುಗಳನ್ನಾಡಿದ್ದಾರೆ. ಹಿಂದೆ ಸಂಘವನ್ನು ವಿರೋಧಿಸುತ್ತಿದ್ದ ಜವಾಹರ ಲಾಲ್ ನೆಹರೂರವರೂ ೧೯೬೩ರ ಗಣತಂತ್ರ ದಿನದ ಪರೇಡ್‌ನಲ್ಲಿ ಸಂಘದ ಸ್ವಯಂಸೇವಕರ ಒಂದು ತುಕಡಿಯನ್ನು ಭಾಗವಹಿಸುವಂತೆ ಆಮಂತ್ರಿಸಿದ್ದರು.

ಹಾಗೆಯೇ ಸಂಘವು ಮಕ್ಕಳ ಮೂಲಕ ವಿಷಬೀಜ ಬಿತ್ತುತ್ತಾರೆ ಎಂಬ ಹೇಳಿಕೆ ಸಮಾಜವನ್ನು ವಿಭಜಿಸುವ ದುರುದ್ದೇಶದ ಭಾಷಣ ಮಾತ್ರವೇ ಆಗಿದೆ. ಸಂಘದ ಸಾವಿರಾರು ಶಾಖೆಗಳಲ್ಲಿ ಲಕ್ಷಾಂತರ ಯುವಕರು ಶಿಸ್ತಿನ, ರಾಷ್ಟ್ರನಿಷ್ಠೆಯ ಮತ್ತು ಸೇವೆಯ ಪಾಠಗಳನ್ನು ಕಲಿಯುತ್ತಾರೆ. ಅದು ‘ವಿಷ’ವಲ್ಲ? ಅದು ರಾಷ್ಟ್ರದೇಶ ಭಕ್ತಿ. ಕಾಂಗ್ರೆಸ್ ಪಕ್ಷವು ಪ್ರತಿ ಚುನಾವಣಾ ವೇಳೆಯಲ್ಲೂ ‘ಆರ್‌ಎಸ್‌ಎಸ್ ವಿರುದ್ಧ ಹೋರಾಟ’ ಎಂಬ ಹಳೆಯ ಹಾಳಾದ ಕ್ಯಾಸೆಟ್ ಹಾಕಿಕೊಂಡು ನಡೆಯುತ್ತಿದೆ. ಜನತೆ ಈಗ ಎಲ್ಲವನ್ನೂ ಅರಿತುಕೊಂಡಿದ್ದಾರೆ. ದೇಶದ ಯುವಕರು ಮತ್ತು ಜನರು ಆರ್‌ಎಸ್‌ಎಸ್‌ನ ಸೇವಾ ಚಟುವಟಿಕೆಗಳನ್ನು ಕಣ್ಣಾರೆ ನೋಡುತ್ತಿದ್ದಾರೆ.

ಅಂತಿಮವಾಗಿ ಹೇಳುವುದಾದರೆ ಈ ದೇಶದ ಜನತೆ ಅಸತ್ಯದ ಮೇಲೆ ನಿಂತ ರಾಜಕೀಯವನ್ನು ಒಪ್ಪುವುದಿಲ್ಲ. ನೂರರ ಸಂಭ್ರಮದಲ್ಲಿರುವ ಸಂಘವನ್ನು ದೇಶಾದ್ಯಂತ ಭಾರತೀಯರು ಸಹರ್ಷದಿಂದ ಸ್ವೀಕರಿಸುತ್ತಿರುವುದೇ ನಿಮ್ಮ ಅಸೂಯೆಯನ್ನು ಪ್ರಕಟಿಸುತ್ತದೆ ಎಂದು ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article