
ಬಿಹಾರ ಚುನಾವಣೆಗೆ ಕರ್ನಾಟಕವನ್ನು ಎಟಿಎಂ ಆಗಿ ಬಳಕೆ ಮಾಡುತ್ತಿದ್ದಾರೆ: ಸಿಎಂ ಆರೋಪ
ಪುತ್ತೂರಿನಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಚುನಾವಣೆಗಾಗಿ ಹಣ ಕಲೆಕ್ಷನ್ ಮಾಡುತ್ತಿದ್ದಾರೆ. ಅವರು ಮಾಡುವ ಕೆಲಸವನ್ನು ನಮ್ಮ ಮೇಲೆ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಆರ್‌ಎಸ್‌ಎಸ್ ಬ್ಯಾನ್ ಮಾಡಿದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಜಗದೀಶ್ ಶೆಟ್ಟರ್ ಅವರು 2013ರಲ್ಲಿಯೇ ಸರಕಾರಿ ಜಾಗ, ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ಬ್ಯಾನ್ ಮಾಡುವ ಕುರಿತು ಶಿಕ್ಷಣ ಇಲಾಖೆ ಮುಖಾಂತರ ಈ ಸುತ್ತೋಲೆ ಹೊರಡಿಸಲಾಗಿತ್ತು. ಯಾಕೆ ಸುತ್ತೋಲೆ ಹೊರಡಿಸಿದ್ದು? ಎಂದು ಅವರು ಉತ್ತರಿಸಬೇಕು ಎಂದು ಹೇಳಿದರು.
ನಾವು ಯಾವುದೇ ಆರ್ಗನೈಸೇಷನ್ ಹೆಸರು ಹೇಳಿಲ್ಲ. ನಾವು ಯಾವ ಆರ್ಗನೈಜೇಶನ್ ಹೆಸರು ಹೇಳಿದ್ದೇವೆ? ಹೇಳಲಿ. ನಾವು ಆರ್‌ಎಸ್‌ಎಸ್ ಹೆಸರು ಹೇಳಿಲ್ಲ, ಅವರು ಹೇಳಿದ್ದನ್ನೇ ನಾವು ರಿಪೀಟ್ ಮಾಡಿದ್ದೇವೆ ಅದು ಯಾವುದೇ ಆರ್ಗನೈಜೇಶನ್ ಆಗಿರಬಹುದು ಎಂದರು.
ಜಗದೀಶ್ ಶೆಟ್ಟರ್ ಅವರು ನಿನ್ನೆ ಹೇಳಿದ್ದಾರೆ ಅದು ಶಿಕ್ಷಣ ಇಲಾಖೆ ಮಾಡಿದ್ದು ಅಂತ, ಹಾಗಾದ್ರೆ ಅವರು ಮುಖ್ಯಮಂತ್ರಿ ಆಗಿರ್ಲಿಲ್ವಾ? ನಾವು ಹೇಳಿರೋದು ಪರ್ಮಿಷನ್ ತಕ್ಕೊಂಡು ಮಾಡ್ಲಿ ಅಂತ ಮಾತ್ರ. ಪರ್ಮಿಷನ್ ಕೊಡಲೇಬೇಕು ಅಂತ ಏನಿಲ್ಲ. ಕಾನೂನು ಸುವ್ಯವಸ್ಥೆ ನೋಡಿ ಅನುಮತಿ ನೀಡಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದರು.