ಜಾನುವಾರು ವಧೆ: ಮೂವರ ಸೆರೆ
ಮಂಗಳೂರು: ಅಕ್ರಮವಾಗಿ ಜಾನುವಾರು ವಧೆಯನ್ನು ಮಾಡುತ್ತಿದ್ದ ಆರೋಪ ಬಗ್ಗೆ ಮಾಹಿತಿಯನ್ನು ಪಡೆದು ಸುರತ್ಕಲ್ ಪೊಲೀಸ್ ಠಾಣೆ ಪಿಎಸ್‌ಐ ರಘುನಾಯಕ್ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಮೂವರನ್ನು ವಶಕ್ಕೆ ಪಡೆದಿದ್ದು, ಇನ್ನೋರ್ವ ತಲೆಮರೆಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಬಂಧಿತರನ್ನು ಚೊಕ್ಕಬೆಟ್ಟುವಿನ ಅಝೀಝ್ ಅಹಮ್ಮದ್,(55) ಇಮ್ತಿಯಾಝ್ (41) ಎ ಕೆ ಆಶಿಕ್, (22) ಎಂದು ಗುರುತಿಸಲಾಗಿದ್ದು, ಬಶೀರ್ ಚೊಕ್ಕಬೆಟ್ಟು ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಇಮ್ತಿಯಾಝ್ ತಂದಿದ್ದ ೨ ದನಗಳನ್ನು ಬಶೀರ್ ಹಾಗೂ ಅಶಿಕ್ ಸೇರಿಕೊಂಡು ವಧೆ ಮಾಡಿ ಕೆ.ಜಿ ಗೆ 3000 ರೂ. ರಂತೆ ಸುಮಾರು 233.89 ಕೆಜಿ ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಇದೀಗ ಪೊಲೀಸರು ಅಕ್ರಮ ಕಸಾಯಿ ಖಾನೆ, ಅಕ್ರಮ ವಧೆ ಕಾನೂನಿನಡಿ ದನಗಳನ್ನು ವಧೆ ಮಾಡಿ, ಯಾವುದೇ ದಾಖಲಾತಿಗಳು ಇಲ್ಲದೇ ದನದ ಮಾಂಸವನ್ನು ಮಾರಾಟ ಮಾಡಲು ತಯಾರಿ ಮಾಡುತ್ತಿದ್ದವರ ಕೇಸು ದಾಖಲಿಸಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಯಾದ ಇಮ್ತಿಯಾಝ್ ಮೇಲೆ ಮಂಗಳೂರು ನಗರದ ಬರ್ಕೆ, ಮೂಡಬಿದ್ರೆ, ಪಣಂಬೂರು, ಸುರತ್ಕಲ್ ಠಾಣೆ ಸೇರಿದಂತೆ ಉಡುಪಿ ಜಿಲ್ಲೆಯ ಕಾಪು, ಕುಂದಾಪುರ, ಕಾರ್ಕಳ ಠಾಣೆಯಲ್ಲಿ ಸುಮಾರು 09 ಪ್ರಕರಣಗಳು ದಾಖಲಾಗಿವೆ. ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೂಚನೆ ಮೇರೆಗೆ ಡಿಸಿಪಿ ಮಿಥುನ್ ಹೆಚ್ ಎನ್ , ಡಿಸಿಪಿ ರವಿಶಂಕರ್ ನಿರ್ದೇಶನದಂತೆ, ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ, ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಪಿ ರವರ ನೇತೃತ್ವದಲ್ಲಿ ಪಿಎಸ್‌ಐ ಗಳಾದ ರಘುನಾಯಕ, ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್.ಐ ಗಳಾದ ತಾರನಾಥ, ಸುಕೇತ್ ಹಾಗೂ ಸಿಬ್ಬಂದಿಯವರಾದ ರಾಜೇಂದ್ರ ಪ್ರಸಾದ್, ಸೈಪುಲ್ಲಾ, ಸತೀಶ್ ಸತ್ತಿಗೇರಿ, ಮಂಜುನಾಥ ಆಯಟ್ಟಿ, ಅಂಜಿನಪ್ಪ, ಮುಹಮ್ಮದ್ ಅನೀಸ್, ಶೈನ್ ಜಾನ್, ರವರು ಆರೋಪಿಗಳ ಪತ್ತೆ ಹಾಗೂ ತನಿಖೆಯಲ್ಲಿ ಭಾಗವಹಿಸಿದ್ದರು.