"ವಿನ್ಯಾಸದಲ್ಲಿ ಸಂಶೋಧನೆ ಮತ್ತು ಯೋಜನಾಧರಿತ ಕಲಿಕೆ" ತರಬೇತಿ ಕಾರ್ಯಾಗಾರ

"ವಿನ್ಯಾಸದಲ್ಲಿ ಸಂಶೋಧನೆ ಮತ್ತು ಯೋಜನಾಧರಿತ ಕಲಿಕೆ" ತರಬೇತಿ ಕಾರ್ಯಾಗಾರ


ಮೂಡುಬಿದಿರೆ: ವಿಶ್ವೇಶ್ವರಯ್ಯ ವಿವಿ ಬೆಳಗಾವಿ ಮತ್ತು ಯೇನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ "ವಿನ್ಯಾಸದಲ್ಲಿ ಸಂಶೋಧನೆ ಮತ್ತು ಯೋಜನಾಧರಿತ ಕಲಿಕೆ" ಎಂಬ ವಿಷಯದ ಕುರಿತು ಒಂದು ದಿನದ ತರಬೇತಿ ಕಾಯಾ೯ಗಾರವು ಬುಧವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. 

ಬೆಳಗಾವಿ ವಿವಿಯ ಮಂಗಳೂರು ವಿಸ್ತರಣಾ ಕೇಂದ್ರದ ವಿಶೇಷ ಅಧಿಕಾರಿ ಡಾ. ದಾಮೋದರ ನರಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾಯಾ೯ಗಾರವನ್ನು ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ಶಿಕ್ಷಣ ವ್ಯವಸ್ಥೆ ಹಾಗೂ ಔದ್ಯೋಗಿಕ ಕ್ಷೇತ್ರಗಳ ಕೊಂಡಿಯಾಗಿ ಕಾಯಾ೯ಗಾರಗಳು ಕೆಲಸ ಮಾಡುತ್ತವೆ. ಇದರಿಂದ ಹೊಸ ಚಿಂತನೆಗಳು ಮತ್ತು ಪ್ರಬುದ್ಧ ಯೋಜನೆಗಳು ಹುಟ್ಟಿಕೊಂಡು ಸಂಶೋಧನೆಗಳಿಗೆ ನಾಂದಿ ಹಾಡುತ್ತವೆ ಎಂದರು.

ಪ್ರಾಂಶುಪಾಲ ಡಾ. ಅಬ್ದುಲ್ ಕರೀಂ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ನಿವ೯ಹಣಾ ಮುಖ್ಯಸ್ಥ ಸುಮೇಶ್ ಮಠದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. 

ಉಪ ಪ್ರಾಂಶುಪಾಲ ಡಾ. ಪ್ರಭಾಕರ ಬಿ ಕೆ, ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಬಿ ಶಾಹೀದ್  ಉಪಸ್ಥಿತರಿದ್ದರು. ಕಾಯ೯ಕ್ರಮದ ಸಂಯೋಜಕ ಡಾ. ಸಂತೋಷ ಆಚಾರ್ಯ ಸ್ವಾಗತಿಸಿದರು. ಸೌಂದಯ೯ ಎಸ್. ಶೆಟ್ಟಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು. 

ಈ ಕಾರ್ಯಾಗಾರದಲ್ಲಿ ಮಂಗಳೂರು ವಲಯದ ವಿವಿಧ ತಾಂತ್ರಿಕ ಕಾಲೇಜಿನ 120 ಪ್ರಾಧ್ಯಾಪಕರು ಭಾಗವಯಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article