ಪ್ರಾಧಿಕಾರದ ಅಧ್ಯಕ್ಷರುಗಳೊಂದಿಗೆ ಮಂಜುನಾಥ ಭಂಡಾರಿ ಚರ್ಚೆ
Tuesday, October 7, 2025
ಮಂಗಳೂರು: ಅ.7 ರಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಮಂಜುನಾಥ ಭಂಡಾರಿ ಅವರು ವಿವಿಧ ನಿಗಮಗಳು, ಪ್ರಾಧಿಕಾರಗಳು ಹಾಗೂ ಅಕಾಡೆಮಿಗಳ ಅಧ್ಯಕ್ಷರುಗಳೊಂದಿಗೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ತಮ್ಮ ತಮ್ಮ ನಿಗಮ, ಪ್ರಾಧಿಕಾರ ಹಾಗೂ ಅಕಾಡೆಮಿಗಳಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳಿಗೆ ಸರ್ಕಾರದಿಂದ ಸಿಗುವ ಪರಿಹಾರ ಒದಗಿಸಿಕೊಡಲು ನಿಮ್ಮೊಂದಿಗೆ ನಾನಿದ್ದೇನೆಂಬ ಭರವಸೆ ನೀಡಿದರು.
ಸರ್ಕಾರವು ನಮ್ಮದಾಗಿರುವುದರಿಂದ, ನಿಗಮಗದ ಅಧ್ಯಕ್ಷರುಗಳು ಸರ್ಕಾರದ ಅಧಿಕಾರಿಗಳು ಹಾಗೂ ಜನರೊಂದಿಗೆ ಸ್ಪಂದನಾಶೀಲವಾಗಿ ಸಮನ್ವಯತೆಯಿಂದ ವರ್ತಿಸಬೇಕೆಂದು ಸಲಹೆ ನೀಡಿದರು.
ಪಕ್ಷವೂ ತಮ್ಮನ್ನು ಗುರುತಿಸಿ ನೀಡಿರುವ ಸ್ಥಾನಮಾನಗಳಿಗೆ ಪ್ರತಿಯಾಗಿ ಪಕ್ಷದ ಸಂಘಟನೆಯ ಬಲವರ್ಧನೆಗಾಗಿ ಪ್ರತಿಯೊಬ್ಬ ಅಧ್ಯಕ್ಷರು ಹೆಚ್ಚು ಸಮಯ ಮೀಸಲಿಡಬೇಕೆಂದು ಸೂಚಿಸಿದರು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ, ವಿವಿಧ ನಿಗಮ ಪ್ರಾಧಿಕಾರ ಹಾಗೂ ಅಕಾಡೆಮಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
